Advertisement

ಕುಕ್ಕುಟೋದ್ಯಮಕ್ಕೆ ಕೊರೊನಾ ಸಂಕಷ್ಟ

10:10 AM Mar 18, 2020 | mahesh |

ಬೆಂಗಳೂರು: ಕೊರೊನಾ ಭೀತಿ ರಾಜ್ಯದ ಕುಕ್ಕುಟ ಉದ್ಯಮದ ಮೇಲೆ ಕರಿನೆರಳು ಬೀರಿದೆ. ಹಕ್ಕಿ ಜ್ವರದ ಅನಂತರ ಚೇತರಿಸಿಕೊಳ್ಳುತ್ತಿದ್ದ ಕುಕ್ಕುಟೋ ದ್ಯಮಕ್ಕೆ ಕೊರೊನಾ ಬಲವಾದ ಆರ್ಥಿಕ ಹೊಡೆತ ನೀಡಿದೆ. 1 ವಾರದಲ್ಲಿ ಈ ಕ್ಷೇತ್ರ ಸುಮಾರು 1 ಸಾವಿರ ಕೋ.ರೂ. ನಷ್ಟ ಅನುಭವಿಸಿದೆ.

Advertisement

ಕೊರೊನಾ ವೈರಸ್‌ ಕೋಳಿ ಮಾಂಸ ದಿಂದಲೇ ಹರಡುತ್ತದೆ ಎಂಬ ವದಂತಿ ಹರಿದಾಡಿದ ಹಿನ್ನೆಲೆಯಲ್ಲಿ ಮಾಂಸಾಹಾರಿಗಳು ಖರೀದಿಗೆ ಉತ್ಸಾಹ ತೋರುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಕೋಳಿ ಮಾಂಸದ ವ್ಯಾಪಾರ ಶೇ. 80 ರಷ್ಟು ಕುಸಿದಿದೆ. ಹೀಗಾಗಿ ಕೋಳಿ ಸಾಕಾ ಣಿಕೆದಾರರು ಮತ್ತು ಉದ್ಯಮಿ ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಪ್ರತಿದಿನ 14 ಲಕ್ಷ ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಆದರೆ ಈಗ 1ರಿಂದ 1.5 ಲಕ್ಷ ಕೆ.ಜಿ.ಗೆ ಬಂದು ನಿಂತಿದೆ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಹಿರಿಯ ಅಧಿಕಾರಿಗಳು “ಉದಯ ವಾಣಿ’ಗೆ ಮಾಹಿತಿ ನೀಡಿದ್ದಾರೆ.

1 ತಿಂಗಳ ಹಿಂದೆ ಕೋಳಿ ಮಾಂಸ ಪ್ರತಿ ಕೆ.ಜಿ.ಗೆ 80 ರೂ.ಗಳಿಂದ 100 ರೂ. ವರೆಗೆ ಇತ್ತು. ಈಗ ಅದು 10 ರಿಂದ 30 ರೂ.ಗೆ ಕುಸಿದಿದೆ. ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ರೋಗ ಕಾಣಿಸಿಕೊಳ್ಳಲಿ, ಇದಕ್ಕೆ ಮೊದಲು ಬಲಿಯಾಗುವುದು ಕುಕ್ಕುಟೋದ್ಯಮಿ. ಕೋಳಿಗಳಿಂದಲೇ ವೈರಾಣು ಹರಡುತ್ತಿದೆ ಎಂದು ವದಂತಿಗಳು ಹಬ್ಬಿ ಗಂಭೀರ ಪ್ರಭಾವ ಬೀರಿದೆ ಎಂದು ಕರ್ನಾಟಕ ಸಹಕಾರಿ ಕುಕ್ಕುಟ ಮಹಾ ಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ಬೇಸರ ವ್ಯಕ್ತಪಡಿಸಿದ್ದಾರೆ.

15 ಲಕ್ಷ ಕುಟುಂಬಗಳ ಅವಲಂಬನೆ
ರಾಜ್ಯದಲ್ಲಿ ಸುಮಾರು 15 ಸಾವಿರ ಕುಟುಂಬಗಳು ಕುಕ್ಕುಟೋದ್ಯಮದ ಮೇಲೆ ಅವಲಂಬಿತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಹಕ್ಕಿಜ್ವರ ದೃಢ
ಮೈಸೂರು: ಕೊರೊನಾ ಭೀತಿಯ ನಡುವೆಯೇ ಮೈಸೂರಿನಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಹೆಬ್ಟಾಳು ಭಾಗದಲ್ಲಿ ಸಾವ ನ್ನಪ್ಪಿದ್ದ 7 ಪಕ್ಷಿಗಳ ಮಾದರಿಗಳನ್ನು ಭೋಪಾಲದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೈ ಸೆಕ್ಯುರಿಟಿ ಎನಿಮಲ್‌ ಡಿಸೀಸ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 2 ಪಕ್ಷಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ಮಾಹಿತಿ ನೀಡಿದ್ದಾರೆ.

Advertisement

ಈ ಪ್ರದೇಶದಲ್ಲಿ ಸೋಂಕು ಹರಡ ದಂತೆ ಇಲಾಖೆ ಕ್ರಮ ಕೈಗೊಂಡಿದೆ. ಕುಂಬಾರ ಕೊಪ್ಪಲು ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಅಂಗಡಿಗಳನ್ನು ಬಂದ್‌ ಮಾಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೊಟ್ಟೆಗೂ ಹೊಡೆತ
ರಾಜ್ಯದಲ್ಲಿ ದಿನಕ್ಕೆ ಸುಮಾರು 2 ಕೋಟಿ ಮೊಟ್ಟೆಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಅದರಲ್ಲಿ ಸುಮಾರು 1.5 ಕೋಟಿ ಯಷ್ಟು ರಾಜ್ಯದಲ್ಲಿ ಮಾರಾಟ ವಾದರೆ ಉಳಿದ 50 ಲಕ್ಷ ನೆರೆಯ ಕೇರಳ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ರವಾನೆಯಾಗುತ್ತಿತ್ತು. ಆದರೆ ಕೊರೊನಾ ಭೀತಿಯಿಂದ ಈಗ ಮೊಟ್ಟೆ ಪೂರೈಕೆ ಕೂಡ ನಿಂತಿದೆ.

ಕೊರೊನಾ ಭೀತಿ ಕುಕ್ಕುಟ ಉದ್ಯಮಕ್ಕೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಕೋಳಿಗಳಿಂದಲೆ ಕೊರೊನಾ ಬಂದಿದೆ ಎಂಬ ವದಂತಿಯಿಂದ ವಾರದಲ್ಲಿ ಉದ್ಯಮ ಸುಮಾರು 1 ಸಾವಿರ ಕೋ.ರೂ. ನಷ್ಟ ಅನು ಭವಿಸಿದೆ.
-ಡಿ.ಕೆ. ಕಾಂತರಾಜು, ರಾಜ್ಯ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next