Advertisement

ಕೊರೊನಾ ಘಾತಕ್ಕೆ ಷೇರು ತತ್ತರ : ಸೆನ್ಸೆಕ್ಸ್‌ ಇತಿಹಾಸದಲ್ಲೇ ಗರಿಷ್ಠ ಪತನ

11:59 PM Mar 20, 2020 | sudhir |

ಮುಂಬಯಿ/ಹೊಸದಿಲ್ಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಷೇರುಪೇಟೆಗಳನ್ನು ಬೆಚ್ಚಿ ಬೀಳಿಸಿದೆ. ಪರಿಣಾಮವಾಗಿ ಗುರುವಾರ ಭಾರತ ಸಹಿತ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಕೋಟ್ಯಂತರ ರೂ. ಸಂಪತ್ತು ಕೊಚ್ಚಿಹೋಗಿದೆ.

Advertisement

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ ಒಂದೇ ದಿನ 2,919.26 ಅಂಕ (ಶೇ.8.18) ಕುಸಿತ ದಾಖಲಿಸಿ ದಿನಾಂತ್ಯಕ್ಕೆ 32,778ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿಯೂ 868 ಅಂಕ (ಶೇ.8.30) ಕುಸಿದು, 9,590ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇದರಿಂದ ಹೂಡಿಕೆದಾರರು 11.27 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಳ್ಳುವಂತಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಯುರೋಪ್‌ನಿಂದ ಅಮೆರಿಕಕ್ಕೆ 30 ದಿನಗಳ ಕಾಲ ಪ್ರಯಾಣ ನಿರ್ಬಂಧ ಘೋಷಿಸಿದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣಿಸಿದವು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾಗತಿಕ ಆರ್ಥಿಕ ಹಿಂಜರಿತ ನಿಶ್ಚಿತ ಎಂಬ ಭೀತಿಯಿಂದ ಮುಂಬಯಿ ಸೇರಿದಂತೆ ಜಗತ್ತಿನ ಬಹುತೇಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಒಂದೇ ಸವನೆ ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಈ ಮಟ್ಟದಲ್ಲಿ ಮಾರುಕಟ್ಟೆಗಳು ಪತನಗೊಳ್ಳುವಂತಾಯಿತು.

ಷೇರುಪೇಟೆ ಪತನಕ್ಕೆ ಕಾರಣವೇನು?
– ಕೊರೊನಾ ವ್ಯಾಪಿಸು ತ್ತಿರುವ ಕಾರಣ ಅನೇಕ ದೇಶ ಗಳ ಪ್ರಯಾಣ ನಿರ್ಬಂಧ ದಿಂದ ಜಾಗತಿಕ ಆರ್ಥಿಕ ಹಿಂಜ ರಿತ ಉಂಟಾಗಲಿದೆ ಎಂಬ ಭೀತಿ.
– ಯುರೋಪ್‌ನಿಂದ ಅಮೆರಿಕಕ್ಕೆ 30 ದಿನಗಳ ಕಾಲ ಪ್ರಯಾಣ ನಿರ್ಬಂಧ.
– ಬ್ರೆಂಟ್‌ ತೈಲ ದರ ಭಾರೀ ಇಳಿಕೆ (ಶೇ.5.50).
– ಡಾಲರ್‌ ಎದುರು ರೂಪಾಯಿ ಮೌಲ್ಯ 56 ಪೈಸೆ ಕುಸಿದು 74.24 ರೂ.ಗೆ ತಲುಪಿದ್ದು (17 ತಿಂಗಳಲ್ಲೇ ಕನಿಷ್ಠ ಮಟ್ಟ ).

ಭೀತಿ ಬೇಡ, ಮುನ್ನೆಚ್ಚರಿಕೆ ವಹಿಸಿ: ಮೋದಿ
ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ಪ್ರಧಾನಿ ಮೋದಿ, “ಭಯಕ್ಕೆ ನೋ ಎನ್ನಿ, ಮುನ್ನೆಚ್ಚರಿಕೆಗೆ ಯೆಸ್‌ ಎನ್ನಿ’ ಎಂಬ ಸಂದೇಶ ರವಾನಿಸಿದ್ದಾರೆ. ಗುರುವಾರ ಟ್ವೀಟ್‌ ಮಾಡಿ, ಮುಂದಿನ ದಿನಗಳಲ್ಲಿ ಕೇಂದ್ರ
ಸರಕಾರದ ಯಾವ ಸಚಿವನೂ ವಿದೇಶಕ್ಕೆ ಪ್ರಯಾಣಿಸುವುದಿಲ್ಲ. ನಾಗರಿಕರೂ ಅನಗತ್ಯ ವಿದೇಶ ಪ್ರವಾಸ ಮಾಡಬೇಡಿ, ಜನಸಂದಣಿಯಿರುವ ಪ್ರದೇಶಕ್ಕೆ ತೆರಳಬೇಡಿ. ಎಲ್ಲರ ಸುರಕ್ಷತೆಗಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next