Advertisement

ಕೊರೊನಾದಿಂದ ಶಿವ ಗಂಗೆ ಜಾತ್ರೆ ಸ್ಥಗಿತ

08:37 PM Jan 14, 2022 | Team Udayavani |

ನೆಲಮಂಗಲ: ದಕ್ಷಿ ಣ ಕಾಶಿ ಎಂದೇ ಕರೆ  ಯುವ ಶಿವ ಗಂಗೆಯಲ್ಲಿ ಕೊರೊ ನಾ ದಿಂದ ಅದ್ಧೂರಿ ಜಾತ್ರೆಗೆ ಸ ರ್ಕಾರ ಬ್ರೇಕ್‌ ಹಾಕಿ  ದ್ದರೂ, ಪ್ರತಿ ವರ್ಷ ಬೆಟ್ಟದಲ್ಲಿ ನಡೆ ಯುವ ವಿಸ್ಮ ಯ  ಮಾತ್ರ ನಿರಂತ ರಾಗಿ ಕಂಡು  ಬ ರು  ತ್ತಿದ್ದು ಭಗ ವಂತನ ನಂಬಿಕೆ ಹೆಚ್ಚಾ ಗಿ ದೆ.

Advertisement

ತಾಲೂಕಿನ ಸೋಂಪುರ ಹೋಬಳಿಯಲ್ಲಿರುವ ಶಿವಗಂಗೆವು ಬೆಟ್ಟವು ಭಾವನಾತ್ಮಕವಾಗಿ ನಾಲ್ಕು ದಿಕ್ಕಿನಿಂದಲೂ ಒಂದೊಂದು ರೀತಿಯಲ್ಲಿ ಗೋಚರಿಸುತ್ತಿದೆ. ನಂದಿ, ಲಿಂಗ, ಸರ್ಷ ಮತ್ತು ಗಣೇಶನಾಕೃತಿಯಲ್ಲಿ ಕಾಣುವ ಮೂಲಕ ಶಿವಗಂಗೆ ಬೆಟ್ಟ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿ ಪ್ರತಿವರ್ಷದ ಮಕರ ಸಂಕ್ರಮಣದ ಸಂದರ್ಭದಲ್ಲಿ ದನಗಳ ಜಾತ್ರೆ ಮತ್ತು ಗಿರಿಜಾ ಕಲ್ಯಾಣ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೊ ನಾ  ದಿಂದ ಸರ ಳ ವಾಗಿ ನಡೆ ಯು ತ್ತಿ ದೆ. ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಶಿವಗಂಗೆಯು ವಿಜಯ ನಗರದ ಅರಸರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಗಂಗರು, ಮೈಸೂರು ಅರಸರ ಆಡಳಿತವನ್ನು ಕಂಡಿದೆ. ಈ ಬೆಟ್ಟದ ಮೇಲಿನ ಕಲ್ಲೆಲ್ಲಾ ಲಿಂಗ, ಹುಲ್ಲೆಲ್ಲಾಪತ್ರೆ, ನೀರೆಲ್ಲಾ ತೀರ್ಥ ಎಂಬ ರೀತಿಯಲ್ಲಿ ಬೆಟ್ಟದ ಮೇಲೆ ಸಾಕಷ್ಟು ತೀರ್ಥಗಳು, ಕಲ್ಲಿನ ಮೇಲೆ ಕೆತ್ತಿರುವ ಗ್ರಹಗಳು ಇದಕ್ಕೆ ಸಾಕ್ಷಿಯಾಗಿವೆ.

ಗಂಗೋ ತ್ಪತ್ತಿ: ಈ ಪುಣ್ಯ ಕ್ಷೇತ್ರದಲ್ಲಿ ಜ. 14ರ ಶುಕ್ರ ವಾರ ಸಂಜೆ 5.50ಕ್ಕೆ ಗಂಗೋ ತ್ಪ ತ್ತಿ  ನಡೆ ಯಲಿದ್ದು, 7.30ರಿಂದ 8.30ರ ಸುಮಾ ರಿಗೆ ಗಿರಿ ಜಾಮ ಹೋ ತ್ಸವ ನಡೆ ಯ ಲಿದೆ. ಈ ಬಾರಿ ಭಕ್ತ ರಿಗೆ ಅವ ಕಾ ಶ ವನ್ನು ನೀಡದೆ ವಿಧಿ ವಿ ಧಾ ನ ದಂತೆ ಅರ್ಚ ಕರು ಹಾಗೂ ಆಡ ಳಿತ ಮಂಡ ಳಿ ಯ ವರಿಗೆ ಮಾತ್ರ ಅವ ಕಾಶ ನೀಡ ಲಾ ಗಿದೆ. ಕ್ಷೇತ್ರದಲ್ಲಿ ದನಗಳ ಜಾತ್ರೆ: ಮಕರ ಸಂಕ್ರಾಂತಿ ಹಬ್ಬದಂದು ಶಿವಗಂಗೆ ಬೆಟ್ಟದ ಮೇಲಿನ ಕಂಬದಲ್ಲಿ ತೀರ್ಥವು ಉದ್ಬವವಾಗುತ್ತದೆ. ಆ ನಂತರ ತೀರ್ಥವನ್ನು ತಂದು ಗಿರಿಜಾ ಕಲ್ಯಾಣೋತ್ಸವವನ್ನು ನೆರವೇರಿ ಸಲಾಗುತ್ತಿದೆ. ಪ್ರತಿವರ್ಷ ಶಿವಗಂಗೆಯ ಕ್ಷೇತ್ರದಲ್ಲಿ ಎರಡು ದನಗಳ ಜಾತ್ರೆ ನಡೆ ಯುತ್ತದೆ. ಜನವರಿಯಲ್ಲಿ ಶ್ರೀ ಗಂಗಾ ಧರೇಶ್ವರ ಸ್ವಾಮಿ ದನಗಳ ಜಾತ್ರೆ ಮತ್ತು ಮಾರ್ಚಿ ತಿಂಗಳಲ್ಲಿ ಶ್ರೀ ಹೊನ್ನಾದೇವಿಯ ದನಗಳ ಜಾತ್ರೆ ನಡೆಯುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next