ರಾಯಚೂರು: ಜಿಲ್ಲೆಯಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ಕೂಡ ಒಂದು. ಆದರೆ, ಕೊರೊನಾ ಎರಡನೇ ಅಲೆಯಿಂದ ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದ ಜಿಲ್ಲೆಯಲ್ಲಿ ಈ ಪದ್ಧತಿ ಕಣ್ಮರೆಯಾಗಿದ್ದು, ಈ ನೆಪದಲ್ಲಾದರೂ ಮಕ್ಕಳ ಹಕ್ಕುಗಳ ರಕ್ಷಣೆಯಾಗುತ್ತಿದೆ. ರಾಜ್ಯದಲ್ಲಿ ಹೆಚ್ಚು ಬಾಲಕಾರ್ಮಿಕ ಪದ್ದತಿ ದಾಖಲಾಗುತ್ತಿರುವ ಜಿಲ್ಲೆಗಳ ಸಾಲಿನಲ್ಲಿ ರಾಯಚೂರು ಕೂಡ ಒಂದು.
ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಾಗಿಲ್ಲವಾದರೂ ಸಣ್ಣ ಪುಟ್ಟ ಅಂಗಡಿ, ಮೆಕ್ಯಾನಿಕ್ ಶಾಪ್‌ಗ್ಳು, ಹೊಲದ ಕೆಲಸಗಳಿಗೆ ಮಕ್ಕಳನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿತ್ತು. ಅ ಧಿಕಾರಿಗಳ ನಿರಂತರ ದಾಳಿ ನಡೆಸಿ ಪ್ರಕರಣ ದಾಖಲಿಸಿ, ದಂಡ ವಿ ಧಿಸುತ್ತಿದ್ದರೂ ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ನಿಯಂತ್ರಣಕ್ಕೆ ಬಂದಿರಲಿಲ್ಲ.
ಕಳೆದ ಎರಡು ತಿಂಗಳಿಂದ ಬಾಲಕಾರ್ಮಿಕ ಪದ್ಧತಿ ಬಹುತೇಕ ಇಲ್ಲವಾಗಿದೆ. ಜಿಲ್ಲೆಯಲ್ಲಿ ಹತ್ತಿ ಬಿಡಿಸುವ ಸೀಜನ್ ಶುರುವಾಗುತ್ತಿದ್ದಂತೆ ತಂಡೋತಂಡವಾಗಿ ವಾಹನಗಳಲ್ಲಿ ಮಕ್ಕಳನ್ನು ಸಾಗಿಸಲಾಗುತ್ತಿತ್ತು. ಅದರಲ್ಲೂ ದೇವದುರ್ಗ ತಾಲೂಕಿನಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚೇ ಇತ್ತು. ಇನ್ನೂ ನಗರ, ಪಟ್ಟಣ ಪ್ರದೇಶಗಳಲ್ಲಿನ ಹೋಟೆಲ್, ಗ್ಯಾರೇಜ್ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಮಕ್ಕಳ ಬಳಕೆ ಹೆಚ್ಚಾಗಿರುತ್ತಿತ್ತು.
ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದಾಳಿ ನಡೆಸುತ್ತಿದ್ದರೆ, ಕೆಲವೊಮ್ಮೆ ಸಾರ್ವಜನಿಕರಿಂದಲೂ ದೂರುಗಳು ಬರುತ್ತಿದ್ದವು. ಕಳೆದ ವರ್ಷ ಅ ಧಿಕಾರಿಗಳು ಜಿಲ್ಲೆಯ ವಿವಿಧೆಡೆ ದೀಢಿರ್ ದಾಳಿ ನಡೆಸಿ ಸುಮಾರು 260ಕ್ಕೂ ಅಧಿ ಕ ಮಕ್ಕಳನ್ನು ರಕ್ಷಿಸಿದ್ದಾರೆ. ಅದರಲ್ಲಿ ಅಂಗಡಿ, ಗ್ಯಾರೇಜ್ , ಫ್ಯಾಕ್ಟರಿಗಳಲ್ಲಾದರೆ ಅದರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಮಕ್ಕಳನ್ನು ಬೇರೆ ಕಡೆ ಕೂಲಿಗೆ ಕರೆದುಕೊಂಡು ಹೋಗುತ್ತಿದ್ದ ಒಟ್ಟು 47 ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದು, ವಾಹನ ಮಾಲೀಕರು, ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆದರೆ, ಈ ವರ್ಷ ಆರಂಭದಲ್ಲಿ ದಾಳಿ ನಡೆಸಿದರೂ ಅಷ್ಟಾಗಿ ಮಕ್ಕಳು ಸಿಕ್ಕಿರಲಿಲ್ಲ. ಆದರೆ, ಹತ್ತಿ ಬಿಡಿಸಲು ಮಕ್ಕಳನ್ನು ಬಳಸಿ ಕೊಳ್ಳುವುದು ಹೆಚ್ಚಾಗಿತ್ತು. ಆ ವೇಳೆಗೆ ಎಲ್ಲೆಡೆ ಕೊರೊನಾ 2ನೇ ಅಲೆ ಶುರುವಾಗಿದ್ದು, ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಮಕ್ಕಳಿಗೆ ಕಾಯಕದ ಹೊರೆ ತಪ್ಪಿ ಹೋಗಿ¨.