Advertisement

ಕೊರೊನಾ ಆಟ ಬಲ್ಲವರಾರು ಹಾಡು ವೈರಲ್‌

04:34 PM May 24, 2021 | Team Udayavani |

ಕಲಬುರಗಿ: ಕನ್ನಡ ಚಲನಚಿತ್ರ ಚಿತ್ರನಟ ವಿಷ್ಣುವರ್ಧನ ಮತ್ತು ನಟಿ ಜೂಲಿ ಲಕ್ಷಿ¾à ನಟಿಸಿರುವ “ಅವಳ ಹೆಜ್ಜೆಯಲ್ಲಿ’ ಚಿತ್ರದಲ್ಲಿ ಡಾ| ಚಿ. ಉದಯಶಂಕರ ಬರೆದ “ದೇವರ ಆಟ ಬಲ್ಲವರಾರು’ ಹಾಡಿನ ಮಾದರಿಯಲ್ಲಿ “ಕೊರೊನಾ ಆಟ ಬಲ್ಲವರಾರು?’ ಎನ್ನುವ ಹಾಡು ಸಖತ್‌ ವೈರಲ್‌ ಆಗುತ್ತಿದೆ.

Advertisement

ಪತ್ರಕರ್ತ, ಸಾಹಿತಿ ಸಂಗಮನಾಥ ರೇವತಗಾಂವ್‌ ಬರೆದ “ಕೊರೊನಾ ಆಟ ಬಲ್ಲವರಾರು, ಅದರ ಎದಿರು ಬದುಕುವರಾರು?’ ಹಾಡಿಗೆ ಜನ ತಲೆದೂಗಿದ್ದಾರೆ. ಈ ಹಾಡು ಫೇಸ್‌ ಬುಕ್‌- ವಾಟ್ಸ್‌ಆ್ಯಪ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿ. ಉದಯಶಂಕರ ಅವರ ಕ್ಷಮೆ ಕೋರುತ್ತಾ ಎಂಬುದಾಗಿ ಹಾಡಿನ ಶಿರ್ಷಿಕೆಗಿಂತ ಮುಂಚೆ ಬರೆಯಲಾಗಿದೆ.

ಕೊರೊನಾ ಕಾಲಘಟ್ಟದಲ್ಲಿ ಸಾಂಸ್ಕೃತಿಕ ವಾತಾವರಣವೇ ಮರೆಯಾಗುತ್ತಿರುವ ದಿನಗಳಲ್ಲಿ ಸಂಗೀತ- ಸಾಹಿತ್ಯವನ್ನು ಮನೆಯಲ್ಲಿದ್ದುಕೊಂಡೇ ಮಡದಿ- ಮಕ್ಕಳೊಂದಿಗೆ ಇಂತಹದ್ದೊಂದು ಪ್ರಯೋಗಕ್ಕೆ ಮುಂದಾಗಿ ಹಾಡನ್ನು ಚಿತ್ರಿಕರಿಸಿ ಬಿಡಲಾಗಿದೆ ಎನ್ನುತ್ತಾರೆ ರೇವತಗಾಂವ್‌. ರೇವತಗಾಂವ ಅವರ ಮಕ್ಕಳಾದ ಸೃಜನಾ, ಸಂಪದಾ ಹಾಡಿದ್ದು, ಪತ್ನಿ ರಶ್ಮಿ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next