Advertisement

ಕೊರೊನಾ 3ನೇ ಅಲೆ ತಡೆಗೆ ಸಕಲ ಸನ್ನದ್ಧ

05:44 PM Jun 10, 2021 | Team Udayavani |

ಬಾಗಲಕೋಟೆ: ಸಂಭವನೀಯ ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳ ಹೆಚ್ಚು ಪರಿಣಾಮ ಬೀರಲಿದ್ದು, ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯಿಂದ ಸನ್ನದ್ಧರಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲನೆ, ಸಂಭವನೀಯ 3ನೇ ಅಲೆ ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೊದಲನೇ ಹಾಗೂ ಎರಡನೇ ಅಲೆ ನಿಯಂತ್ರಣ ಎಲ್ಲರೂ ಶ್ರಮಿಸಿದ್ದು, ಜಿಲ್ಲಾಡಳಿತಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳು ಸಹ ಕೋವಿಡ್‌ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದರು.

ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ: ಸಂಭವನೀಯ 3ನೇ ಅಲೆ ನಿಯಂತ್ರಣಕ್ಕೂ ಸಹ ಬಿವಿವ ಸಂಘದ ಕುಮಾರೇಶ್ವರ ಆಸ್ಪತ್ರೆ ಕೈಜೋಡಿಸುತ್ತಿದೆ. ಈಗಾಗಲೇ ಚಿಕ್ಕ ಮಕ್ಕಳಿ ಚಿಕಿತ್ಸೆಗೆ 120 ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಕಾರ್ಯವನ್ನು ಕಂಡು ಅಭಿನಂಧಿಸಿದರು. ಸರಕಾರವು ಸಹ 3ನೇ ನಿಯಂತ್ರಣಕ್ಕೆ ಸನ್ನದ್ಧವಾಗಿದೆ. ಗ್ರಾಮ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ಮನೆ ಮನೆ ಸರ್ವೇ ಕಾರ್ಯ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಪ್ರತಿ ಜಿಲ್ಲೆಗೆ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಿ ಗಂಡು ಮತ್ತು ಹಣ್ಣು ಮಕ್ಕಳಿಗೆ ಪ್ರತ್ಯೇಕ ಆರೈಕೆಗೆ ವ್ಯವಸ್ಥೆ ಮಾಡಬೇಕು. ಮಕ್ಕಳಲ್ಲಿ ಪಾಜಿಟಿವ್‌ ಬಂದಲ್ಲಿ ಮಗುವಿನೊಂದಿಗೆ ತಾಯಿ ಇರಲು ವ್ಯವಸ್ಥೆ ಮಾಡಲು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 6 ಕಡೆಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಗುರುತಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದಾಗ ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿ ಮಕ್ಕಳ ಆರೈಕೆಗೆ ವಿಶಾಲವಾದ ಆಟದ ಮೈದಾನ ಹೊಂದಿರುವ ವಸತಿ ನಿಲಯಗಳನ್ನು ಗುರುತಿಸಿ ಪ್ರಕರಣಗಳಿಗೆ ತಕ್ಕಂತೆ ಬೆಡ್‌ಗಳ ತಯಾರಿಸಿಕೊಳ್ಳಬೇಕು. ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದ್ದಲ್ಲಿ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ 15 ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಸರ್ವೇ ಕಾರ್ಯ ನಡೆಸಲಾಗಿದೆ. ಇದಕ್ಕಾಗಿ ಬಿವಿವಿ ಸಂಘದ ಮಹಾವಿದ್ಯಾಲಯದಿಂದ 150 ವೈದ್ಯರ ತಂಡ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯ ತಂಡ ಪುರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎ.ಕೆ. ಬಸಣ್ಣವರ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ವಲಸೆಯಿಂದ ಬಂದ ಮಕ್ಕಳು 657, ಗರ್ಭಿಣೀಯರು 178, ಬಾಣಂತಿಯರು 102 ಇದ್ದು, ಅವರೆಲ್ಲರಿಗೂ ಆಹಾರ ವಿತರಿಸಲಾಗಿದೆ. ಒಟ್ಟು 22 ಮಕ್ಕಳ ಪಾಲನೆ ಸಂಸ್ಥೆಗಳ ಪೈಕಿ 10 ಸಂಸ್ಥೆಗಳಲ್ಲಿ 62 ಮಕ್ಕಳು ಇವೆ. ವಿಕಲಚೇತನ, ಸ್ವಾದಾರ, ನಿರ್ಗತಿಕ ಮಕ್ಕಳ ಕುಟಿರ ಹಾಗೂ ಸುಧಾರಣಾ ಸಂಸ್ಥೆಯ ನಿವಾಸಿ ಸೇರಿ 103 ಪೈಕಿ 98 ಜನರಿಗೆ ಲಸಿಕೆ ಕೊಡಿಸಲಾಗಿದೆ. 5 ಜನ ಮಾತ್ರ ಬಾಕಿ ಉಳಿದಿರುವಾಗಿ ತಿಳಿಸಿದರು.

50 ಲಕ್ಷ ಪರಿಹಾರ: ಕೋವಿಡ್‌ ಮೊದಲೇ ಅಲೆಯಲ್ಲಿ ಬಾದಾಮಿ ತಾಲೂಕಿನ ಓರ್ವ ಅಂಗನವಾಡಿ ಕಾರ್ಯಕರ್ತೆ ಮೃತಪಟ್ಟಿದ್ದು, ಕೇಂದ್ರ ಸದರಕಾರದಿಂದ 50 ಲಕ್ಷ ಮರಣ ಪರಿಹಾರ ನೀಡಲಾಗಿದೆ. 2ನೇ ಅಲೆಯಲ್ಲಿ ಮುಧೋಳ ಮತ್ತು ಜಮಖಂಡಿ ತಾಲೂಕಿನ ತಲಾ ಒಬ್ಬರು ಮೃತಪಟ್ಟಿದ್ದು, ಪರಿಹಾರಧನಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ 5 ಇದ್ದು, ಮಕ್ಕಳ ಪ್ರಾಯೋಜಕತ್ವ ಯೋಜನೆಯಡಿ ಆರ್ಥಿಕ ಸಹಾಯಧನ ನೀಡಲು ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳಿಗೆ ಮನೆ ಮನೆಗೆ ತೆರಳಿ ಮಗುವಿನ ಆರೈಕೆ ಪೋಷಣೆ ಕುರಿತು ತಿಳಿವಳಿಕೆ ಹಾಗೂ ಆಹಾರ ವಿತರಿಸಲಾಗುತ್ತಿದೆ ಎಂದು ಎ.ಕೆ. ಬಸಣ್ಣವರ ತಿಳಿಸಿದಾಗ, ಅಂತಹ ಮಕ್ಕಳಿಗೆ ಚವನ್‌ಪ್ರಾಸ್‌ ನೀಡಲು ಕ್ರಮಕೈಗೊಳ್ಳುವಂತೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಜಿಲ್ಲೆಯ 2221 ಅಂಗನವಾಡಿ ಕೇಂದ್ರಗಳಿಗೆ ವೈದ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಟಿ.ಭೂಬಾಲನ್‌, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌.ದೇಸಾಯಿ, ಸಿಡಿಪಿಒ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next