Advertisement
ಇದುಕಾಪುಸಮೀಪದ ಕಾಪು ಪಾರ್ ಬಂಡೆಗೆಸಿಲುಕಿಅಪಾಯ ಕ್ಕೊಳಗಾಗಿ ನೌಕಾ ಪಡೆಯ ಐಎನ್‌ಎಸ್ ವರಾಹ ಮತ್ತು ಐಎನ್ 702 ನಡೆಸಿದ ಕಾರ್ಯಾಚರಣೆಯಿಂದಾಗಿ ಬದುಕಿ ಬಂದ ಕೋರಮಂಡಲ್ ಸಪೋರ್ಟರ್ 9 ಮಿನಿ ನೌಕೆಯಲ್ಲಿದ್ದ 9 ಮಂದಿ ಸಿಬಂದಿಯ ಪೈಕಿ ಲಕ್ಷ್ಮೀನಾರಾಯಣ್ ಹೇಳಿದ ಮಾತುಗಳು.
Related Articles
Advertisement
ರವಿವಾರ ಬೆಳಗಾಗುತ್ತಲೇ ಮೊಬೈಲ್ ಮೂಲಕ ರಕ್ಷಣೆಗಾಗಿ ಎನ್‌ಎಂಪಿಟಿ, ನಮ್ಮ ಕೀರೋಸ್ ಕಂಪೆನಿಗೆ ಮಾಹಿತಿ ನೀಡಿದೆವು. ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ನೌಕಾಪಡೆಯ ಹಡಗು ನಮ್ಮನ್ನು ಅನುಸರಿಸಿಕೊಂಡು ನಮ್ಮ ಜತೆಗೆ ಸಾಗಿ ಬಂದಿತ್ತು. ಆದರೆ ಚಂಡಮಾರುತ, ಕಡಲಬ್ಬರ ಮತ್ತು ಮಳೆಯ ಪರಿಣಾಮ ಅದಕ್ಕೆ ನಮ್ಮ ಹತ್ತಿರ ಬರಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆ ನೌಕಾಪಡೆಯ ವರಾಹ ಹಡಗು ಮತ್ತು ಹೆಲಿಕಾಪ್ಟರ್ ಮೂಲಕ ರಕ್ಷಿಸಿದ್ದು ನಮಗೆ ತುಂಬು ಖುಷಿ ಕೊಟ್ಟಿದೆ ಎಂದವರು ನಡೆದ ಘಟನೆಯನ್ನು ವಿವರಿಸಿದರು.
ಐವರಿಗೆ ಕೋವಿಡ್!
ಉದಯವಾಣಿ ಜತೆ ಮಾತುಕತೆ ನಡೆಸಿದ ಪ್ರಶಾಂತ್ ಸುಬ್ರಹ್ಮಣ್ಯಂ ಮತ್ತು ಲಕ್ಷ್ಮೀನಾರಾಯಣ ಸೇರಿದಂತೆ ನೌಕೆಯಲ್ಲಿದ್ದ ಮೊಯ್ನುದ್ದೀನ್ ಮುಲ್ಲಾ ಖಾನ್ (ಪೈಲಟ್), ಗೌರವ್ ಕುಮಾರ್ (ಸೆಕೆಂಡ್ ಆಫೀಸರ್), ಶಾಂತನು, ರಾಹುಲ್ ಮಜುಮ್ದಾರ್, ತುಷಾರ್ ಕುಮಾರ್, ರಿಯಾದ್ ಅಹಮದ್ ಅವರು ಆಘಾತದಿಂದ ಚೇತರಿಸುತ್ತಿದ್ದಾರೆ. ಅವರಲ್ಲಿ ಐವರಿಗೆ ಪಾಸಿಟಿವ್ ಬಂದಿರುವ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನ್ನ ನೀಡಿದ ನೌಕೆ ಕೈಬಿಡಲಿಲ್ಲ :
ನಾವು ಎದುರಿಸಿದ ನೋವು, ಯಾತನೆಯನ್ನು ವರ್ಣಿಸುವಂತಿಲ್ಲ. ಅದನ್ನು ಸಜೀವ ನರಕ ದರ್ಶನವೆಂದೇ ಹೇಳಬಹುದು. ಆದರೆ ನಮಗೆ ಅನ್ನ ನೀಡುತ್ತಿದ್ದ ನೌಕೆ ಕೊನೆವರೆಗೂ ನಮ್ಮ ಕೈಬಿಡಲಿಲ್ಲ. ಬಂಡೆಗೆ ಢಿಕ್ಕಿ ಹೊಡೆದು ಅಲ್ಲೇ ನಿಲ್ಲುವ ಬದಲು ಮುಳುಗುತ್ತಿದ್ದರೆ ನಾವು ಬದುಕುಳಿಯುವ ಸಾಧ್ಯತೆ ಗಳೇ ಇರುತ್ತಿರಲಿಲ್ಲ. ನೌಕೆ ಬಂಡೆಗೆ ಅಪ್ಪಳಿಸಿದಾಗ ಬಹಳಷ್ಟು ಹಾನಿ ಗೀಡಾಗಿತ್ತು. ಜನರೇಟರ್ ಕೈಕೊಟ್ಟಿದ್ದರಿಂದ ಎರಡು ದಿನ ಕತ್ತಲಲ್ಲೇ ಕಳೆದೆವು. ಊಟ-ತಿಂಡಿಗೂ ತತ್ವಾರವಿತ್ತು. ನೌಕೆಯ ಬಹುಭಾಗವೂ ನೀರಿನ ಅಡಿಯಲ್ಲಿತ್ತು. ಮೇಲಿನ ಭಾಗದಲ್ಲಿ ಕುಳಿತೇ 2 ದಿನ ಕಳೆದಿದ್ದೇವೆ ಎಂದು ಪ್ರಶಾಂತ್ ಸುಬ್ರಹ್ಮಣ್ಯಂ ವಿವರಿಸಿದರು.
ನಾವು ಎದುರಿಸಿದ ಪರಿಸ್ಥಿತಿಯ ಬಗ್ಗೆ ನಮ್ಮ ಮನೆಯವರಿಗೆ ಈ ವರೆಗೂ ಮಾಹಿತಿ ನೀಡಿಲ್ಲ. ನಮ್ಮ ನೋವನ್ನು ನಾವೇ ಮರೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುವಾಗ ಗದ್ಗದಿತರಾದರು.
ನಾವು ಅಪಾಯಕ್ಕೆ ಸಿಲುಕಿರುವ ಸುದ್ದಿ ತಿಳಿದ ಕೂಡಲೇ ನೌಕಾ ಪಡೆ ನಮ್ಮ ರಕ್ಷಣೆಗೆ ಧಾವಿಸಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅವರಿಗೆ ನಮ್ಮ ಕಡೆ ಬರಲು ಸಾಧ್ಯವಾಗಿರಲಿಲ್ಲ. ಆದರೂ ಆಗಾಗ ಕರೆ ಮಾಡಿ ನಮ್ಮ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದರು. ಆ ಎರಡು ದಿನಗಳಲ್ಲಿ ಅವರ ಸೇವೆ ಸ್ಮರಣೀಯವಾಗಿದೆ. ನಮ್ಮ ರಕ್ಷಣೆ ಮತ್ತು ಆರೈಕೆಗೆ ಕೀರೋಸ್ ಕಂಪೆನಿ, ಎನ್‌ಎಂಪಿಟಿ ನೀಡಿದ ಸಹಕಾರಕ್ಕೆ ಚಿರಋಣಿಗಳಾಗಿದ್ದೇವೆ. – ಪ್ರಶಾಂತ್ ಸುಬ್ರಹ್ಮಣ್ಯಂ (ಸೆಕೆಂಡ್ ಎಂಜಿನಿಯರ್)