ಬೇಯಿಸಿದ ಜೋಳ: ಒಂದೂವರೆ ಕಪ್
ಬೇಯಿಸಿದ ಬಟಾಟೆ: ಎರಡು
ಈರುಳ್ಳಿ: ಒಂದು
ಕ್ಯಾಪ್ಸಿಕಮ್: ಒಂದು
ಹಸಿಮೆಣಸು: ಎರಡು
ಉಪ್ಪು: ರುಚಿಗೆ ತಕ್ಕಷ್ಟು
ಗರಂ ಮಸಾಲ: ಅರ್ಧ ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ನಿಂಬೆರಸ: ಒಂದು ಚಮಚ
ಬ್ರೆಡ್: ಎರಡು
ಅಕ್ಕಿ ಹುಡಿ: ಎರಡು ಚಮಚ
ಮೈದಾ: ಎರಡು ಚಮಚ
ಎಣ್ಣೆ: ಕರಿಯಲು
Advertisement
ಮೊದಲು ಬೇಯಿಸಿದ ಜೋಳವನ್ನು ನೀರು ಸೇರಿಸದೆ ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಬೇಕು. ಅನಂತರ ಒಂದು ಪಾತ್ರೆಗೆ ಹುಡಿ ಮಾಡಿದ ಜೋಳ, ಬಟಾಟೆ, ಈರುಳ್ಳಿ, ಕ್ಯಾಪ್ಸಿಕಮ್, ಹಸಿಮೆಣಸು, ಉಪ್ಪು, ಗರಂ ಮಸಾಲೆ, ಕೊತ್ತಂಬರಿ ಸೊಪ್ಪು. ನಿಂಬೆರಸ, ನೀರಿನಲ್ಲಿ ನೆನೆಸಿದ ಬ್ರೆಡ್, ಅಕ್ಕಿ ಹುಡಿ, ಮೈದಾ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನೀರು ಸೇರಿಸಬಾರದು. ಈ ಮಿಶ್ರಣವನ್ನು 10 ನಿಮಿಷ ಫ್ರಿಡ್ಜ್ನಲ್ಲಿಟ್ಟು ಅನಂತರ ಒಂದು ಕೋಲಿಗೆ ಈ ಮಿಶ್ರಣವನ್ನು ಜೋಡಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು.