Advertisement

ಗರ್ಭಿಣಿಯೇಕೆ ಜೋಳ ತಿನ್ನಬೇಕು?

06:00 AM Oct 31, 2018 | |

ಗರ್ಭಿಣಿಯರು, ಏನನ್ನಾದರೂ ತಿನ್ನುತ್ತಾ ಇರಬೇಕೆಂದು ಬಯಸುತ್ತಾರೆ. ಅವರ ದೇಹ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿರುವುದರಿಂದ, ಗರ್ಭಿಣಿಯರ ಡಯಟ್‌ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಆ ಸಮಯದಲ್ಲಿ ನಿರಾಂತಕವಾಗಿ ತಿನ್ನಬಹುದಾದ ಪದಾರ್ಥಗಳಲ್ಲಿ ಮೆಕ್ಕೆಜೋಳವೂ ಒಂದು. ಹಾಗಂತ, ಅದನ್ನು ಪಾಪ್‌ಕಾರ್ನ್ ರೂಪದಲ್ಲಿ ಸೇವಿಸುವುದಲ್ಲ. ಬದಲಿಗೆ, ಹಸಿಯಾಗಿರುವ, ಸುಟ್ಟ ಅಥವಾ ಹಬೆಯಲ್ಲಿ ಬೇಯಿಸಿದ ಮೆಕ್ಕೆಜೋಳ ಗರ್ಭಿಣಿಯರಿಗೆ ಉತ್ತಮ.

Advertisement

1.    ಮೆಕ್ಕೆಜೋಳದಲ್ಲಿ ಅಧಿಕವಾಗಿರುವ ನಾರಿನಾಂಶ, ಗರ್ಭಿಣಿಯರನ್ನು ಕಾಡುವ ಮಲಬದ್ಧತೆಗೆ ಉಪಶಮನ ನೀಡುತ್ತದೆ. 

2.     ಬೀಟಾ ಕ್ಯಾರೋಟಿನ್‌ ಅಂಶ ಹೆಚ್ಚಿರುವುದು, ಭ್ರೂಣದ ಬೆಳವಣಿಗೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿ. 

3.    ಮೆಗ್ನಿàಷಿಯಂ, ಕಬ್ಬಿಣ, ರಂಜಕದ ಅಂಶಗಳು ಹೇರಳವಾಗಿರುವ ಕಾರಣ ಮೂಳೆ ಬಲಿಷ್ಠವಾಗುತ್ತದೆ. 

4.    ಮೆಕ್ಕೆಜೋಳದಲ್ಲಿ ವಿಟಮಿನ್‌ “ಬಿ’ ಮತ್ತು ಫಾಲಿಕ್‌ ಆ್ಯಸಿಡ್‌ ಅಂಶ ಅಧಿಕವಾಗಿದ್ದು, ರಕ್ತ ಉತ್ಪಾದನೆಗೆ ಸಹಕಾರಿ. “ಇ’ ವಿಟಮಿನ್‌ಗಳು ಗರ್ಭಿಣಿಯರನ್ನು ರಕ್ತಹೀನತೆಯ ಸಮಸ್ಯೆಯಿಂದ ದೂರ ಇಡುತ್ತವೆ. 

Advertisement

5.    ಹೊಟ್ಟೆಯೊಳಗೆ ಇರುವ ಮಗುವಿನ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

6.    ಮೆಕ್ಕೆಜೋಳದಲ್ಲಿನ ಥಿಯಾಮೈನ್‌ ಎಂಬ ಅಂಶ, ತಾಯಿ- ಮಗುವಿನ ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ.

7.    ಗರ್ಭಿಣಿ ತಾಯಿ ಮೆಕ್ಕೆಜೋಳವನ್ನು ಸೇವಿಸಿದರೆ, ಅದರಲ್ಲಿರುವ ಝೀಕ್ಸಾಂಥಿನ್‌ ಅಂಶ, ಹುಟ್ಟಲಿರುವ ಮಗುವಿನ ಸ್ನಾಯುಗಳನ್ನು ದೃಢಗೊಳಿಸುತ್ತದೆ.

8.    ಮೆಕ್ಕೆಜೋಳದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌, ಸ್ತನ ಕ್ಯಾನ್ಸರ್‌ ಅನ್ನು ತಡೆಯುತ್ತವೆ.

9.    ಬಿ1 ಮತ್ತು ಬಿ5 ವಿಟಮಿನ್‌ ಹೇರಳವಾಗಿರುವುದರಿಂದ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮ.

10.    ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು. 

11.    ಮೆಕ್ಕೆಜೋಳದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್‌ ಆರೋಗ್ಯಕ್ಕೆ ಉತ್ತಮವಾದುದು. 

ಹೇಗೆ  ಸೇವಿಸಬಹುದು?
1. ಸಲಾಡ್‌, ಸೂಪ್‌, ಟೋಸ್ಟ್‌, ಸ್ಯಾಂಡ್‌ವಿಚ್‌ನ ರೂಪದಲ್ಲಿ
2. ಅನ್ನದ ಪದಾರ್ಥಗಳ, ಪಿಜ್ಜಾ, ಪಾಸ್ತಾದ ಜೊತೆಗೆ ಸೇರಿಸಬಹುದು. 
3. ಹಬೆಯಲ್ಲಿ ಬೇಯಿಸಿ ತಿನ್ನಿ.
4. ಸುಟ್ಟ ಜೋಳವೂ ರುಚಿಯಾಗಿರುತ್ತದೆ.
ತಿನ್ನುವ ಮುನ್ನ…
1.    ರಸ್ತೆ ಬದಿಯಲ್ಲಿ ಮಾರುವ ಮೆಕ್ಕೆಜೋಳದ ಸೇವನೆ ಒಳ್ಳೆಯದಲ್ಲ.
2.  ಸುತ್ತ ಇರುವ ಎಲೆ ಹಸಿಯಾಗಿದ್ದರೆ, ಜೋಳದ ಕಾಳನ್ನು ಹಿಸುಕಿದಾಗ ರಸ ತುಂಬಿದ್ದರೆ, ಫ್ರೆಶ್‌ ಇದೆ ಎಂದರ್ಥ.
3. ಎಲೆ ಸಮೇತವಾಗಿ ಅದನ್ನು ಫ್ರಿಡ್ಜ್ನಲ್ಲಿಡಿ ಅಥವಾ ಮೆಕ್ಕೆಜೋಳವನ್ನು ಬಿಡಿಸಿ, ಕಾಳುಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಫ್ರಿಡ್ಜ್ನಲ್ಲಿಡಿ.
5. ಹೃದಯದ ಸಮಸ್ಯೆ ಇರುವವರು ಮೆಕ್ಕೆಜೋಳವನ್ನು ಅತಿಯಾಗಿ ಬಳಸಬಾರದು.
6. ವೈದ್ಯರ ಸಲಹೆ ಮೇರೆಗೆ ದಿನದ ಆಹಾರದಲ್ಲಿ ಜೋಳವನ್ನು ಸೇರಿಸಿ.

 ಹರ್ಷಿತಾ ಕುಲಾಲ್‌ ಕಾವು 

Advertisement

Udayavani is now on Telegram. Click here to join our channel and stay updated with the latest news.

Next