ಜೋಳದ ಹಿಟ್ಟು -1 ಕಪ್
ಕೆನೆ ಹಾಲು-1 ಕಪ್
ಪಚ್ಚ ಬಾಳೆಹಣ್ಣು – 1
ಬೇಕಿಂಗ್ ಸೋಡಾ/ l ಅಡುಗೆ ಸೋಡಾ l 1/2 ಟೀ ಚಮಚ
ಬೆಲ್ಲ -ಸ್ವಲ್ಪ
ತುಪ್ಪ -ಸ್ವಲ್ಪ
ಡ್ರೈಫ್ರೂಟ್ಸ್ -ಸ್ವಲ್ಪ
Advertisement
ಮಾಡುವ ವಿಧಾನಮೊದಲಾಗಿ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ಬೆಲ್ಲ, ತುಪ್ಪ, ಬೇಕಿಂಗ್ ಸೋಡಾ, ಹಾಲು ಮತ್ತು ಜೋಳದ ಹಿಟ್ಟು ಎಲ್ಲವನ್ನೂ ಹಾಕಿ ಚೆನ್ನಾಗಿ ಎರಡು ನಿಮಿಷ ಕಲಸಿ ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ ಒಂದು ತುಪ್ಪ ಸವರಿದ ಪಾತ್ರೆಗೆ ಈ ಮಿಶ್ರಣವನ್ನು ಹಾಕಬೇಕು. ಅನಂತರ ಅದರ ಮೇಲೆ ಡ್ರೈ ಫ್ರುಟ್ಸ್ ಅನ್ನು ಉದುರಿಸಬೇಕು, ಅನಂತರ ಸ್ವಲ್ಪ ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಹದಿನೈದು ನಿಮಿಷ ಸಣ್ಣ ಉರಿಯಲ್ಲಿ ಇಡಬೇಕು. ಅದನ್ನು ಇಳಿಸಿ ಚಾಕುವಿನಿಂದ ಅಥವಾ ಚಮಚದಿಂದ ಚುಚ್ಚಿ ನೋಡಬೇಕು. ಅದು ಅಂಟಿಲ್ಲ ಎಂದರೆ ರುಚಿಯಾದ ಸವಿಯಾದ ಜೋಳದ ಹಿಟ್ಟಿನ ಕೇಕ್ ಸವಿಯಲು ಸಿದ್ಧ.