Advertisement

ಜೋಳ ಮತ್ತು ಸೂರ್ಯಕಾಂತಿ ಬೀಜ ಬಿಡಿಸುವ ಯಂತ್ರ

05:46 PM Oct 13, 2019 | Sriram |

ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಕೃಷಿಕಾರ್ಯಗಳಿಗೆ ಬೇಕಾಗುವ ಯಂತ್ರಗಳನ್ನು ರೂಪಿಸುವುದಕ್ಕೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆದ್ಯತೆ ನೀಡಿದೆ. ಈ ದೆಸೆಯಲ್ಲಿ ಮುಸುಕಿನ ಜೋಳ ಮತ್ತು ಸೂರ್ಯಕಾಂತಿ ತೆನೆಗಳಿಂದ ಬೀಜಗಳನ್ನು ಬೇರ್ಪಡಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದೆ. ಯಂತ್ರದ ಅಶ್ವಶಕ್ತಿ ಹೆಚ್ಚಿದಷ್ಟೂ ಅದು ಬಳಸುವ ವಿದ್ಯುತ್‌ ಯೂನಿಟ್‌ನ ಪ್ರಮಾಣ ಅಧಿಕ. ಆದ್ದರಿಂದ, ಕಡಿಮೆ ಅಶ್ವಶಕ್ತಿಯ ಕೃಷಿಯಂತ್ರ ರೂಪಿಸುವುದರತ್ತ ತಜ್ಞರು ಗಮನಹರಿಸಿದ್ದಾರೆ. ಮುಸುಕಿನ ಜೋಳ ಮತ್ತು ಸೂರ್ಯಕಾಂತಿ ತೆನೆಗಳಿಂದ ಬೀಜಗಳನ್ನು ಬೇರೆ ಬೇರೆ ಮಾಡುವ ಯಂತ್ರದ ಅಶ್ವಶಕ್ತಿ ಕೇವಲ 0.25 ಹೆಚ್‌.ಪಿ. ಮಾತ್ರ.

Advertisement

ಈ ಯಂತ್ರವನ್ನು ಸಿಂಗಲ್‌ ಫೇಸ್‌ನಲ್ಲಿಯೂ ಚಾಲನೆ ಮಾಡಬಹುದು. ಇದರ ಕಮರ್ಷಿಯಲ್‌ ಬಳಕೆಗೆ ವಿದ್ಯುತ್‌ ಪರವಾನಗಿ ಅಗತ್ಯವಿಲ್ಲ. ಮನೆಯಲ್ಲಿಯೇ ಇಟ್ಟುಕೊಂಡು ಕೂಡಾ ಬಳಸಬಹುದು. ಇದರ ವೈಶಿಷ್ಟé ಏನೆಂದರೆ ಏಕಕಾಲದಲ್ಲಿ ಇಬ್ಬರು ಮುಸುಕಿನ ಜೋಳ ಅಥವಾ ಸೂರ್ಯಕಾಂತಿ ಬೀಜಗಳನ್ನು ಬೇರ್ಪಡಿಸಬಹುದು. ಪ್ರತಿ ಗಂಟೆಗೆ 100 ಕಿಲೋಗ್ರಾಮ್‌ ಬೀಜ ಬೇರ್ಪಡೆಯಾಗುತ್ತದೆ. ಈ ಕೆಲಸ ಬೇಗ ಆಗುತ್ತದೆ. ಗುಣಮಟ್ಟವೂ ಇರುತ್ತದೆ.

ಈ ಯಂತ್ರದ ಅಂದಾಜು ಬೆಲೆ 5,000 ರೂ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ವಿಭಾಗದ ತಜ್ಞರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 080-23545640

– ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next