ಸೌಂದರ್ಯವರ್ಧಕವೂ ಹೌದು. ಕೊತ್ತಂಬರಿಯನ್ನು ಮನೆಯಲ್ಲಿ ಬಳಸಿ ಸುಲಭದಲ್ಲಿಯೇ ತಯಾರಿಸಬಹುದಾದ ಸೌಂದರ್ಯ ಪ್ರಸಾದನಗಳ ಕುರಿತಾಗಿ ಅರಿಯೋಣ.
Advertisement
1. ಫೇಸ್ ಮಾಸ್ಕ್ತಾಜಾ ಕೊತ್ತಂಬರಿ ಸೊಪ್ಪನ್ನು ಐದು ಚಮಚ ತೆಗೆದುಕೊಂಡು ಅದಕ್ಕೆ 2 ಚಮಚ ದಪ್ಪ ಮೊಸರು, 2 ಚಮಚ ಕುಮಾರೀಗಿಡದ ಎಲೆಯ ತಿರುಳು ಬೆರೆಸಿ ಚೆನ್ನಾಗಿ ಅರೆಯಬೇಕು. ತದನಂತರ ಮುಖಕ್ಕೆ ಲೇಪಿಸುವ ಮೊದಲು ಮೂರು ಚಮಚ ತೆಂಗಿನಕಾಯಿಯ ಹಾಲು ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಮುಖ ತೊಳೆದರೆ ಮೊಗದ ಕಾಂತಿ ವರ್ಧಿಸುತ್ತದೆ. ಹಾಗೂ ಚರ್ಮದ ತಾಜಾತನ ಹಾಗೂ ಮೃದುತ್ವ ಹೆಚ್ಚುತ್ತದೆ. ಚಳಿಗಾಲದಲ್ಲಿ ಬಹಳ ಉಪಯುಕ್ತ.
ಕೊತ್ತಂಬರಿ ಸೊಪ್ಪು 5 ಚಮಚ, ಅಕ್ಕಿಹಿಟ್ಟು 3 ಚಮಚ, ಮೊಸರು 2 ಚಮಚ, ಶುದ್ಧ ಜೇನು 2 ಚಮಚ – ಇವೆಲ್ಲವುಗಳನ್ನು
ಬೆರೆಸಿ ಬ್ಲೆಂಡರ್ ಅಥವಾ ಮಿಕ್ಸರ್‌ನಲ್ಲಿ ಸ್ವಲ್ಪ ಗುಲಾಬಿ ಜಲ ಬೆರೆಸಿ ತಿರುವಬೇಕು. ಇದನ್ನು ಲೇಪದಂತೆ ಇಡೀ ಮುಖಕ್ಕೆ ಲೇಪಿಸಿ ಹದಿನೈದು ನಿಮಿಷಗಳ ಬಳಿಕ ತೊಳೆಯಬೇಕು. ಇದರಿಂದ ಅಧಿಕ ತೈಲಯುಕ್ತ ತ್ವಚೆಯುಳ್ಳವರಲ್ಲಿ ತೈಲಾಂಶ (ಜಿಡ್ಡು) ಕೊಳೆ-ಧೂಳು ನಿವಾರಣೆಯಾಗಿ ಮೊಗ ಶುಭ್ರವಾಗುತ್ತದೆ. 3. ಕೊತ್ತಂಬರಿಯ ಫೇಸ್‌ಲಿಫ್ಟ್
2 ಮುಷ್ಠಿಯಷ್ಟು ಕೊತ್ತಂಬರಿಯ ಎಲೆಗಳು, 2 ಮೊಟ್ಟೆಯ ಬಿಳಿಭಾಗ, 1/2 ಕಪ್ ಬೇಯಿಸದ (ಹಸಿ) ಓಟ್ಸ್ ಹಾಗೂ 2 ಚಮಚ ಜೇನುತುಪ್ಪ , 3 ಚಮಚ ತಾಜಾ ಎಳೆ ಸೌತೆಕಾಯಿಯ ರಸ- ಇವೆಲ್ಲವನ್ನೂ ಮಿಕ್ಸರ್ ಅಥವಾ ಬ್ಲೆಂಡರ್‌ನಲ್ಲಿ ತಿರುವಿ ಪೇಸ್ಟ್ ತಯಾರಿಸಬೇಕು. ಇದನ್ನು ಇಡೀ ಮುಖಕ್ಕೆ ಲೇಪಿಸಿ ತುದಿಬೆರಳುಗಳಿಂದ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆಯಬೇಕು.
Related Articles
Advertisement
4. ಕೊತ್ತಂಬರಿಯ ಸಾಲ್ಟ್2 ಚಮಚ ಕೊತ್ತಂಬರಿ ಬೀಜಗಳನ್ನು ಒಂದು ಗಂಟೆ ನೀರಿನಲ್ಲಿ ಅದ್ದಿ ಇಡಬೇಕು. ಬಳಿಕ ನುಣುಪಾಗಿ ಅರೆಯಬೇಕು. ಇದಕ್ಕೆ ಸ್ವಲ್ಪ ಅರಸಿನ ಹುಡಿ, ಸ್ವಲ್ಪ ಜೇನು ಬೆರೆಸಿ ಕಪ್ಪು ಮಚ್ಚೆ ಹಾಗೂ ಕಲೆ ಇರುವ ಭಾಗದಲ್ಲಿ ದಪ್ಪಗೆ ಪೇಸ್ಟ್‌ನಂತೆ ಲೇಪಿಸಬೇಕು. ರಾತ್ರಿ ಹಚ್ಚಿ ಬೆಳಿಗ್ಗೆ ತೆಗೆಯಬೇಕು. ಹೀಗೆ ನಿತ್ಯವೂ ಲೇಪಿಸುವುದರಿಂದ ಕಪ್ಪು ಮಚ್ಚೆ ಕಪ್ಪು ಕಲೆ ಇತ್ಯಾದಿಗಳು ತಿಳಿಯಾಗಿ ನಿವಾರಣೆಯಾಗುತ್ತವೆ. 5. ಕೊತ್ತಂಬರಿಯ ಸ್ಪಾಟ್ ಟ್ರೀಟ್‌ಮೆಂಟ್
ಬ್ಲ್ಯಾಕ್‌ಹೆಡ್ಸ್ ಹಾಗೂ ವೈಟ್‌ಹೆಡ್ಸ್ ನಿವಾರಣೆಗೆ ಈ ವಿಧಾನ ಪರಿಣಾಮಕಾರಿ. ತಾಜಾ ಕೊತ್ತಂಬರಿ ಎಲೆ 2 ಚಮಚ, ಪುದೀನಾ ಎಲೆ 2 ಚಮಚ ಚೆನ್ನಾಗಿ ಅರೆದು, ಈ ಮಿಶ್ರಣಕ್ಕೆ 2 ಚಮಚ ನಿಂಬೆರಸ ಬೆರೆಸಬೇಕು. ಇದನ್ನು ಬ್ಲ್ಯಾಕ್ ಹೆಡ್ಸ್ ಹಾಗೂ ವೈಟ್‌ಹೆಡ್ಸ್ ಇರುವ ಭಾಗದಲ್ಲಿ ಲೇಪಿಸಿ ಒಂದು ಗಂಟೆಯ ಬಳಿಕ ತೊಳೆಯಬೇಕು. ನಿತ್ಯ ಇದನ್ನು ಲೇಪಿಸಿದರೆ ಶೀಘ್ರ ಪರಿಣಾಮಕಾರಿ.