Advertisement

ಶೇ.75 ಮಕ್ಕಳಿಗೆ ಕಾರ್ಬೆವ್ಯಾಕ್ಸ್‌ ಲಸಿಕೆ

02:55 PM Apr 08, 2022 | Team Udayavani |

ಹಾವೇರಿ: ಕೊರೊನಾ ಮೂರನೇ ಅಲೆ ಆರ್ಭಟ ಜಿಲ್ಲಾದ್ಯಂತ ತಗ್ಗಿದ್ದರೂ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತೆಯೊಂದಿಗೆ ಜಿಲ್ಲೆಯಲ್ಲಿ 12-14 ವರ್ಷ ವಯೋಮಾನದ ಶೇ.75ರಷ್ಟು ಮಕ್ಕಳಿಗೆ ಕಾರ್ಬೆವ್ಯಾಕ್ಸ್‌ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿವೆ.

Advertisement

ಕೇಂದ್ರ ಸರ್ಕಾರ 12-14 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ನೀಡುತ್ತಿದ್ದಂತೆ ಮಾ.16ರಂದು ಸಾಂಕೇತಿಕವಾಗಿ ಲಸಿಕಾಕರಣಕ್ಕೆ ಚಾಲನೆ ನೀಡಲಾಗಿತ್ತು.

ನಂತರ ಜಿಲ್ಲೆಯ ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಹಾಗೂ ಶಾಲೆಗಳಲ್ಲಿ ಉಚಿತವಾಗಿ ಕಾರ್ಬೆವ್ಯಾಕ್ಸ್‌ ಲಸಿಕಾ ಅಭಿಯಾನ ಆರಂಭಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಮೊದಲು ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕಿದ್ದರಿಂದ ಲಸಿಕೆ ಪಡೆಯುವವರ ಸಂಖ್ಯೆ ವಿರಳವಾಗಿತ್ತು. ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

53,330 ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಜಿಲ್ಲಾಡಳಿತ 12-14 ವರ್ಷದ ಮಕ್ಕಳ ಪೈಕಿ ಬ್ಯಾಡಗಿ ತಾಲೂಕಿನ 2793 ಮಕ್ಕಳು, ಸವಣೂರು 4123, ಹಾವೇರಿ 11,223, ರಾಣಿಬೆನ್ನೂರು 11,773, ಹಾನಗಲ್ಲ 8623, ಹಿರೇಕೆರೂರು 8235, ಶಿಗ್ಗಾವಿ 6560 ಮಕ್ಕಳು ಸೇರಿ ಒಟ್ಟು 53,330 ಮಕ್ಕಳನ್ನು ಗುರುತಿಸಿದೆ. ಲಸಿಕಾ ಅಭಿಯಾನದ ಆರಂಭದ ದಿನಗಳಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಗಳತ್ತ ಕರೆತರಲು ಹಿಂದೇಟು ಹಾಕುತ್ತಿದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಚಿಂತೆಗೇಡು ಮಾಡಿತ್ತು. ನಂತರ ದಿನಗಳಲ್ಲಿ ಇಲಾಖೆ ಅಧಿಕಾರಿಗಳು ಪಾಲಕರ ಮನವೊಲಿಸಿ ಮಕ್ಕಳಿಗೆ ಲಸಿಕೆ ಹಾಕಿಸುವಲ್ಲಿ ನಿರತರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 39,753 ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ಶೇ.75 ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ 12-14 ವರ್ಷದ 53,330 ಮಕ್ಕಳ ಪೈಕಿ ಬ್ಯಾಡಗಿ ತಾಲೂಕಿನ 3384 ಮಕ್ಕಳು, ಸವಣೂರು 3868, ಹಾವೇರಿ 8653, ರಾಣಿಬೆನ್ನೂರ 8999, ಹಾನಗಲ್ಲ 5914, ಹಿರೇಕೆರೂರು 5118 ಹಾಗೂ ಶಿಗ್ಗಾವಿ ತಾಲೂಕಿನ 3817 ಮಕ್ಕಳು ಸೇರಿ ಒಟ್ಟು 39,753 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ.75ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಮೂರನೇ ಅಲೆ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಲಸಿಕೆ ಪಡೆಯಲು ನಿರಾಸಕ್ತಿ ವಹಿಸುತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ 53,330 ಮಕ್ಕಳ ಪೈಕಿ 39753 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 13,577 ಮಕ್ಕಳಿಗೆ ಲಸಿಕೆ ನೀಡಬೇಕಾಗಿದೆ.

Advertisement

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಇನ್ನು ಜಿಲ್ಲೆಯಲ್ಲಿ ಇಲ್ಲಿಯವರೆಗೆ 18ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಕೋವಿಡ್‌ ಲಸಿಕೆ ಮೊದಲನೇ ಡೋಸ್‌ ಶೇ.102.08 ಮತ್ತು ಎರಡನೇ ಡೋಸ್‌ ಶೇ.99.42ರಷ್ಟು ಪ್ರಗತಿ ಸಾ ಧಿಸಲಾಗಿದ್ದು, ಲಸಿಕಾಕರಣ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ.

 

ಜಿಲ್ಲೆಯಲ್ಲಿ 12-14ವರ್ಷ ವಯೋಮಾನದ 53,330 ಮಕ್ಕಳಿಗೆ ಲಸಿಕೆ ಹಾಕಲು ಗುರುತಿಸಲಾಗಿದ್ದು, ಈ ಪೈಕಿ ಶೇ.75ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. 12-14ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವಲ್ಲಿ ರಾಜ್ಯಮಟ್ಟದಲ್ಲಿ ಹಾವೇರಿ ಜಿಲ್ಲೆ 6ನೇ ಸ್ಥಾನದಲ್ಲಿದೆ. ಶಾಲೆಗಳು ರಜೆ ಬಿಡುವ ವೇಳೆಗೆ ಉಳಿದ ಮಕ್ಕಳಿಗೂ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಎಲ್ಲ ತಾಲೂಕಿನ ಬಿಇಒ ಹಾಗೂ ಶಾಲೆಯ ಶಿಕ್ಷಕರು ಅಗತ್ಯ ಸಹಕಾರ ನೀಡಬೇಕು. –ಡಾ|ಎಸ್‌.ಎಚ್‌.ರಾಘವೇಂದ್ರಸ್ವಾಮಿ, ಡಿಎಚ್‌ಒ ಹಾವೇರಿ

 

ಜಿಲ್ಲೆಯಲ್ಲಿ 12-14ವರ್ಷ ವಯೋಮಾನದ 39,753 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 13,577 ಮಕ್ಕಳಿಗೆ ಲಸಿಕೆ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಲಸಿಕೆಗೆ ಕೊರತೆ ಇಲ್ಲ. ಇನ್ನು ಎರಡೂ¾ರು ದಿನಗಳಲ್ಲಿ ಲಸಿಕಾಕರಣದ ನಿಗದಿತ ಗುರಿ ಸಾಧಿಸಲಾಗುವುದು. –ಡಾ|ಜಯಾನಂದ, ಆರ್‌ಸಿಎಚ್‌ ಅಧಿಕಾರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next