Advertisement

Copyright Case: ರಕ್ಷಿತ್‌ಗೆ 20 ಲಕ್ಷ ರೂ. ಠೇವಣಿ ಇಡಲು ದೆಹಲಿ ಹೈಕೋರ್ಟ್‌ ಆದೇಶ

11:54 AM Aug 18, 2024 | Team Udayavani |

ನವದೆಹಲಿ: ನಟ ಹಾಗೂ ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರಿಗೆ ಕಾಪಿರೈಟ್‌ ಸಂಬಂಧದ ಪ್ರಕರಣದಲ್ಲಿ 20 ಲಕ್ಷ ರೂ. ಠೇವಣಿ ಇಡಲು ದೆಹಲಿ ಹೈಕೋರ್ಟ್‌ ಆದೇಶಿಸಿದೆ.

Advertisement

ರಕ್ಷಿತ್‌ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್‌ ನಿರ್ಮಿಸಿದ್ದ ‘ಬ್ಯಾಚು ಲರ್‌ ಪಾರ್ಟಿ’ ಸಿನಿಮಾದಲ್ಲಿ “ನ್ಯಾಯ ಎಲ್ಲಿದೆ’ ಹಾಡನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ನವೀನ್‌ ಕುಮಾರ್‌ ಎಂಬುವರ ನೇತೃತ್ವದ ಎಂಆರ್‌ಟಿ ಮ್ಯೂಸಿಕ್‌ ಕಂಪನಿಯು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ ಆ.12 ರಂದೇ ತೀರ್ಪು ನೀಡಿತ್ತು ಎಂದು ಎಂ.ಆರ್‌.ಟಿ. ಮ್ಯೂಸಿಕ್‌ ಸಂಸ್ಥೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಚಿತ್ರದಲ್ಲಿ “ನ್ಯಾಯ ಎಲ್ಲಿದೆ’ ಮತ್ತು “ಒಮ್ಮೆ ನಿನ್ನನ್ನು’ ಎಂಬ ಹಾಡುಗಳನ್ನು ಅನುಮತಿಯಿಲ್ಲದೇ ಬಳಸಿಕೊಳ್ಳಲಾಗಿದೆ ಎಂದು ಎಂಆರ್‌ಟಿ ಸಂಸ್ಥೆ ಪ್ರತಿಪಾದಿಸಿ, ಬೆಂಗಳೂರಿನ ಯಶವಂತಪುರ  ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿತ್ತು.

ಸಮನ್ಸ್‌ ನೀಡಿದ ಬಳಿಕವೂ ರಕ್ಷಿತ್‌ ವಿಚಾರಣೆಗೆ ಗೈರಾದ ಕಾರಣ ದೆಹಲಿ ಹೈಕೋರ್ಟ್‌ ಅವರಿಗೆ 20 ಲಕ್ಷ ರೂ. ಠೇವಣಿ ಇಡಲು ಸೂಚಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡ ಲಾಗಿರುವ ಈ ಹಾಡುಗಳನ್ನು ತೆಗೆಯಬೇಕೆಂದು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next