ಪಣಜಿ: ಐಷಾರಾಮಿ ಜೀವನಶೈಲಿಯ ಭರವಸೆಯ ಮೇರೆಗೆ ಆಮಿಷ ಒಡ್ಡಿ ಅಪಹರಣಕ್ಕೆ ಒಳಗಾಗಿದ್ದ ಕರ್ನಾಟಕದ ಮೂಲದ ಇಬ್ಬರು ಬಾಲಕಿಯರನ್ನು ಪೊಲೀಸರು ಬುಧವಾರ ರಕ್ಷಿಸಿದ್ದಾರೆ.
ಹುಬ್ಬಳ್ಳಿಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 12 ಮತ್ತು 15 ವರ್ಷದ ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ, ಉತ್ತರ ಗೋವಾದ ಎರಡು ಗ್ರಾಮಗಳಿಂದ ಪ್ರತ್ಯೇಕವಾಗಿ ಹುಡುಗಿಯರನ್ನು ಅಪಹರಿಸಲಾಗಿದೆ ಮತ್ತು ನಾಪತ್ತೆಯಾದವರ ವರದಿಯನ್ನು ಮೇ 29 ರಂದು ದಾಖಲಿಸಲಾಗಿತ್ತು. ಕೊಲ್ವಾಲೆಯ ಪೊಲೀಸ್ ತಂಡವು ಹುಬ್ಬಳ್ಳಿಯ ತಮ್ಮ ಸಹವರ್ತಿಗಳ ಸಹಾಯದಿಂದ ಉತ್ತರ ಗೋವಾದಲ್ಲಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದೆ.
“ಮೇ 29 ರಂದು, ಒಬ್ಬ ಬಾಲಕಿಯ ತಂದೆ ತನ್ನ ಅಪ್ರಾಪ್ತ 12 ವರ್ಷದ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ತಿಳಿಸಲು ಪೊಲೀಸರನ್ನು ಸಂಪರ್ಕಿಸಿದರು. ಅದೇ ದಿನ ಜಿಲ್ಲೆಯ ಮತ್ತೋರ್ವ ಮಹಿಳೆ ತನ್ನ 15 ವರ್ಷದ ಮಗಳು ನಾಪತ್ತೆಯಾಗಿರುವ ಬಗ್ಗೆ ಇದೇ ರೀತಿಯ ದೂರು ದಾಖಲಿಸಿದ್ದಾರೆ,” ಎಂದು ಹೇಳಿದರು.
ಈ ಸಂಬಂಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 363 (ಅಪಹರಣ) ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ”ತನಿಖೆಯ ವೇಳೆ ಬಾಲಕಿಯರನ್ನು ಕರ್ನಾಟಕದ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.