Advertisement

ಲಾಠಿ ಹಿಡಿದ ಕೈಯಲ್ಲಿ ಹೊಲಿಗೆ ಯಂತ್ರ

12:48 PM Apr 05, 2020 | Suhan S |

ಕೆಜಿಎಫ್: ಕೋವಿಡ್ 19 ವೈರಸ್‌ ವಿರುದ್ಧ ಹೋರಾಟ ನಡೆಸುತ್ತಿರುವ ಇಲಾಖೆಗಳ ಪೈಕಿ ಪೊಲೀಸ್‌ ಇಲಾಖೆ ಕೂಡ ಪ್ರಮುಖವಾಗಿದೆ. ಪ್ರತಿನಿತ್ಯ ಬಿಡು ವಿಲ್ಲದ ಸಮಯದಲ್ಲಿ ತಮ್ಮ ಕುಟುಂಬ ದವರ ಯೋಗ ಕ್ಷೇಮ ವಿಚಾರಿಸುವುದು ಅವರಿಗೆ ಕಷ್ಟದ ಕೆಲಸವಾಗಿದೆ. ತಮ್ಮ ಕುಟುಂಬದವರ ಆರೋಗ್ಯದ ಕುರಿತು ಆತಂಕದಲ್ಲಿ ಇದ್ದಾರೆ.

Advertisement

ಇಂತಹ ಸಮಯದಲ್ಲಿ ಕೆಜಿಎಫ್ ಪೊಲೀಸ್‌ ಜಿಲ್ಲೆಯ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಮುಖ ಗವಸು (ಮಾಸ್ಕ್) ಹೊಲಿದು ಪ್ರತಿ ಪೊಲೀಸ್‌ ಕುಟುಂಬಕ್ಕೆ ವಿತರಣೆ ಮಾಡುತ್ತಿದ್ದಾರೆ. ಚಾಂಪಿಯನ್‌ ರೀಫ್ಸ್ ನ ಪೊಲೀಸ್‌ ಕಲ್ಯಾಣನಿಧಿ ಕಟ್ಟಡ ದಲ್ಲಿ ಪೊಲೀಸ್‌ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ನಾಲ್ಕು ಮಂದಿ ಹೊಲಿಗೆ ಗೊತ್ತಿರುವವರು ಬಟ್ಟೆಯ ಮಾಸ್ಕ್ ಹೊಲಿಯುತ್ತಿದ್ದಾರೆ. ಪ್ರತಿನಿತ್ಯ 150 ಮಾಸ್ಕ್ ಗಳನ್ನು ತಯಾರು ಮಾಡಲಾಗುತ್ತಿದೆ. ಎಲ್ಲಾ ವಸ್ತುಗಳನ್ನು ಕಲ್ಯಾಣ ನಿಧಿಯಿಂದ ಖರೀದಿಸಿ, ಹೊಲಿಗೆ ಕಲಿತರವ ರಿಂದ ಮಾಸ್ಕ್ ಹೊಲಿಸಲಾಗುತ್ತಿದೆ ಎಂದು ಜಿಲ್ಲಾ ಸಶಸ್ತ್ರ ಪಡೆಯ ಇನ್ಸ್‌ಪೆಕ್ಟರ್‌ ಟಿ. ಮಂಜುನಾಥ್‌ ಹೇಳುತ್ತಾರೆ.

ಕೆಜಿಎಫ್ ಜಿಲ್ಲೆಯಲ್ಲಿರುವ ಎಲ್ಲಾ ಪೊಲೀಸ್‌ ಕುಟುಂಬಳಿಗೂ ತಲಾ 2 ಮಾಸ್ಕ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಮಾಸ್ಕ್ಗಳು ತೊಳೆಯ ಬಹುದಾಗಿದ್ದು, ಹಲವಾರು ಬಾರಿಉಪಯೋಗಿಸಲ್ಪಡಬಹುದಾಗಿದೆ. ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹೊಲಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿಗಳಲ್ಲಿ ಸಿಗುವ ಮಾಸ್ಕ್ ಗಳು ಪರಿಣಾಮಕಾರಿಯಾಗಿರುವುದಿಲ್ಲ. ಉತ್ತಮ ಗುಣಮಟ್ಟದ ಬಟ್ಟೆಯನ್ನು ತರಿಸಿ, ನಮ್ಮ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕೊಡುತ್ತಿದ್ದೇವೆ. -ಎಂ.ಎಸ್‌.ಮಹಮದ್‌ ಸುಜೀತ, ಎಸ್ಪಿ

 

Advertisement

-ಬಿ.ಆರ್‌.ಗೋಪಿನಾಥ್‌

Advertisement

Udayavani is now on Telegram. Click here to join our channel and stay updated with the latest news.

Next