Advertisement
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪಂಜಾಬ್‌ನ ಹೋಶಿಯಾರ್‌ಪುರ ಕೇಂದ್ರ ಕಾರಾಗೃಹಕ್ಕೆ ಸೇರಿದ ಆಂಬ್ಯುಲೆನ್ಸ್ ಇದಾಗಿದ್ದು ಇಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಕೆಂಪು ಟಿ ಶರ್ಟ್ ಧರಿಸಿದ್ದ ಖೈದಿ ಸೇರಿ ಮದ್ಯ ಸೇವಿಸುತ್ತಿರುವುದು ಕಾಣಬಹುದು.
ಇದೆ ರೀತಿಯ ಘಟನೆ ಒಡಿಶಾದ ತಿರ್ಟೋಲ್ ಪ್ರದೇಶದಲ್ಲಿ ಈ ಹಿಂದೆಯೂ ನಡೆದಿತ್ತು ಎನ್ನಲಾಗಿದ್ದು ರೋಗಿಯೊಬ್ಬರನ್ನು ತಪಾಸಣೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಮದ್ಯ ಸೇವಿಸಿದ ಘಟನೆ ನಡೆದಿತ್ತು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಂಬುಲೆನ್ಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
Related Articles
ಪೊಲೀಸ್ ಅಧಿಕಾರಿಗಳು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Advertisement
ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ: ಪ್ರಿಯಕರನಿಗಾಗಿ ಭಾರತಕ್ಕೆ ಬಂದ 47 ವರ್ಷದ ಪೋಲೆಂಡ್ ಮಹಿಳೆ