Advertisement

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

07:37 PM May 25, 2024 | Team Udayavani |

ಪುಣೆ: ಪುಣೆ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಪಘಾತದ ಹೊಣೆ ಹೊತ್ತುಕೊಳ್ಳುವಂತೆ ತಮ್ಮ ಕುಟುಂಬದ ಕಾರು ಚಾಲಕನಿಗೆ ಬೆದರಿಕೆ ಹಾಕಿದ ಆರೋಪದಲ್ಲಿ 17 ವರ್ಷದ ಆರೋಪಿಯ ಅಜ್ಜ ಸುರೇಂದ್ರ ಕುಮಾರ್‌ ಅಗರ್ವಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಅವರನ್ನು ಶನಿವಾರ ಪುಣೆಯ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಮೇ 28ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ನೀಡಿದೆ.

ಕಿಡ್ನ್ಯಾಪ್, ಬೆದರಿಕೆ:
ಕಾರು ಅಪಘಾತದ ಬಳಿಕ ತಮ್ಮ ಮೊಮ್ಮಗನನ್ನು ರಕ್ಷಿಸುವ ಸಲುವಾಗಿ ಸುರೇಂದ್ರ ಅಗರ್ವಾಲ್‌, ತಮ್ಮ ಕುಟುಂಬದ ಕಾರು ಚಾಲಕನನ್ನು ಕರೆಸಿಕೊಂಡಿದ್ದರು. ಈ ಅಪಘಾತದ ವೇಳೆ ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಸುಳ್ಳು ಹೇಳಬೇಕು. ಈ ವಿಚಾರವನ್ನು ಯಾರೊಂದಿಗೂ ಬಾಯಿಬಿಡಬಾರದು ಎಂದು ಸೂಚಿಸಿದ್ದಲ್ಲದೆ, ಆತನ ಮೊಬೈಲ್‌ ಕಸಿದುಕೊಂಡು, ಮೇ 19ರಿಂದ 22ರ ವರೆಗೆ ಅವರ ಬಂಗಲೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದರು. ಆರಂಭದಲ್ಲಿ ತಾನೇ ಅಪಘಾತ ಎಸಗಿದ್ದಾಗಿ ಹೇಳಿದ್ದ ಚಾಲಕ, ನಂತರ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಚಾಲಕ ನೀಡಿದ ದೂರಿನ ಮೇರೆಗೆ ಈಗ ಸುರೇಂದ್ರರನ್ನು ಬಂಧಿಸಲಾಗಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next