Advertisement

Kollur ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ

09:56 PM Jun 18, 2024 | Team Udayavani |

ಕೊಲ್ಲೂರು: ಕೊಲ್ಲೂರು ವೃತ್ತದ ಬಳಿಯ ರಾಷ್ಟ್ರೀಯ ಹೆದ್ದಾರಿ 766ರ ಮುಖ್ಯ ರಸ್ತೆಯ ವಸತಿಗೃಹವೊಂದರ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಹೊಸನಗರ ತಾಲೂಕಿನ ಪ್ರವೀಣ (25) ಮತ್ತು ಕುಂದಾಪುರದ ಹೇಮಂತ ಕುಮಾರ್‌ (26) ಬಂಧಿತರು.

ಇವರು ಜಗಳವಾಡುತ್ತಿದ್ದ ಮಾಹಿತಿ ಪಡೆದ ಪಿಎಸ್‌ಐ ಜಯಶ್ರೀ ಹುನ್ನೂರ ಅವರು ಸ್ಥಳಕ್ಕೆ ತೆರಳಿ ಬಂಧಿಸಿದ್ದಾರೆ.

ಪ್ರವಾಸಿಗರನ್ನು ಖಾಸಗಿ ವಸತಿ ಗೃಹಗಳಿಗೆ ಬಾಡಿಗೆಗೆ ಕರೆಯುವ ವಿಷಯಕ್ಕೆ ಸಂಬಂಧಿಸಿ ಇವರ ನಡುವೆ ಜಗಳವಾಗಿದೆ ಎಂದು ತಿಳಿದುಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next