Advertisement
ಅವರನ್ನು ಶನಿವಾರ ಪುಣೆಯ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಮೇ 28ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.
ಕಾರು ಅಪಘಾತದ ಬಳಿಕ ತಮ್ಮ ಮೊಮ್ಮಗನನ್ನು ರಕ್ಷಿಸುವ ಸಲುವಾಗಿ ಸುರೇಂದ್ರ ಅಗರ್ವಾಲ್, ತಮ್ಮ ಕುಟುಂಬದ ಕಾರು ಚಾಲಕನನ್ನು ಕರೆಸಿಕೊಂಡಿದ್ದರು. ಈ ಅಪಘಾತದ ವೇಳೆ ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಸುಳ್ಳು ಹೇಳಬೇಕು. ಈ ವಿಚಾರವನ್ನು ಯಾರೊಂದಿಗೂ ಬಾಯಿಬಿಡಬಾರದು ಎಂದು ಸೂಚಿಸಿದ್ದಲ್ಲದೆ, ಆತನ ಮೊಬೈಲ್ ಕಸಿದುಕೊಂಡು, ಮೇ 19ರಿಂದ 22ರ ವರೆಗೆ ಅವರ ಬಂಗಲೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದರು. ಆರಂಭದಲ್ಲಿ ತಾನೇ ಅಪಘಾತ ಎಸಗಿದ್ದಾಗಿ ಹೇಳಿದ್ದ ಚಾಲಕ, ನಂತರ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಚಾಲಕ ನೀಡಿದ ದೂರಿನ ಮೇರೆಗೆ ಈಗ ಸುರೇಂದ್ರರನ್ನು ಬಂಧಿಸಲಾಗಿದೆ ಎಂದಿದ್ದಾರೆ.