Advertisement

ಉ.ಪ್ರ.ರೈಲ್ವೇ ಸ್ಟೇಶನ್‌: ಮಹಿಳೆಯ ಛಿದ್ರ ಶವ; ರೇಪ್‌ ಶಂಕೆ

03:22 PM Sep 15, 2017 | Team Udayavani |

ರಾಮ್‌ಪುರ, ಉತ್ತರ ಪ್ರದೇಶ : ಇಲ್ಲಿನ ಮಿಲಾಕ್‌ ರೈಲು ನಿಲ್ದಾಣದಲ್ಲಿ ಇಂದು ಶುಕ್ರವಾರ 30ರ ಹರೆಯದ ವಿವಾಹಿತ ಮಹಿಳೆಯ ವಿರೂಪಗೊಳಿಸಲಾದ ಮೃತ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 

Advertisement

ಮಹಿಳೆಯ ಮುಖವನ್ನು ಇಟ್ಟಿಗೆಯಿಂದ ಛಿದ್ರ ವಿಛಿದ್ರಗೊಳಿಸಲಾಗಿದೆ. ಆಕೆ ಉಟ್ಟಿದ್ದ ಬಟ್ಟೆಯನ್ನು ಹರಿದು ಚಿಂದಿ ಮಾಡಲಾಗಿದೆ. ಬಹುಷಃ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದರ ಸೂಚನೆ ಇದಾಗಿದೆ. ಮಹಿಳೆಯ ಮುಖ ಜಜ್ಜಿ ಹಾಕಲಾಗಿರುವುದರಿಂದ ಆಕೆಯ ಗುರುತು ಪತ್ತೆ ಅಸಾಧ್ಯವಾಗಿದೆ ಎಂದು ಸರ್ಕಲ್‌ ಪೊಲೀಸ್‌ ಅಧಿಕಾರಿ ಒ ಪಿ ಆರ್ಯ ತಿಳಿಸಿದ್ದಾರೆ.

ಮೃತ ಮಹಿಳೆಯು ವಿವಾಹಿತೆಯಗಿದ್ದು ಆಕೆಯ ಗುರುತು ಪತ್ತೆಯಾಗಬಾರದೆಂದು ಆಕೆಯ ಮುಖವನ್ನು ಜಜ್ಜಿ ಹಾಕಲಾಗಿದೆ ಎಂದವರು ಹೇಳಿದರು. 

ಈ ಘಟನೆಯನ್ನು ಅನುಸರಿಸಿ ದುಷ್ಕರ್ಮಿಯನ್ನು ಕೂಡಲೇ ಪತ್ತೆ ಹಚ್ಚಿ ಸೆರೆ ಹಿಡಿಯುವ ಸಲುವಾಗಿ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ವಿಪಿನ್‌ ತಾಡಾ ತಿಳಿಸಿದ್ದಾರೆ. 

ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿ ವಿಜ್ಞಾನ ಪರಿಣತರು ಮಹಿಳೆಯ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಅಂತೆಯೇ ಮೃತ ದೇಹ ಪತ್ತೆಯಾದ ಪ್ಲಾಟ್‌ ಪಾರಂ ಸಮೀಪದಲ್ಲಿ ಕಂಡು ಬಂದ ಪಾದದ ಅಚ್ಚಿನ ಮಾದರಿಯನ್ನೂ ಕಲೆಹಾಕಲಾಗಿದೆ ಎಂದು ತಾಡಾ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next