ಲಕ್ನೋ: ರಸ್ತೆಯಲ್ಲಿ ಸ್ಕೇಟಿಂಗ್ ತರಬೇತಿ ಸಂದರ್ಭದಲ್ಲಿ ವೇಗವಾಗಿ ಬಂದ ಎಸ್ ಯುವಿ ಹೊಡೆತಕ್ಕೆ ಸಿಲುಕಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ 10ವರ್ಷದ ಮಗನೊಬ್ಬ ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ಇದನ್ನೂ ಓದಿ:Visakhapatnam: ಆಟೋ – ಟ್ರಕ್ ಢಿಕ್ಕಿ; ಅಪಘಾತದ ರಭಸಕ್ಕೆ ಹಾರಿಬಿದ್ದ ಶಾಲಾ ಮಕ್ಕಳು
ಬಾಲಕನಿಗೆ ಡಿಕ್ಕಿ ಹೊಡೆದ ಎಸ್ ಯುವಿ ನಿಲ್ಲಿಸದೇ ಹೊರಟು ಹೋಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಅಡಿಷನಲ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಶ್ವೇತಾ ಶ್ರೀವಾತ್ಸವ್ ಅವರ ಪುತ್ರ ನಮೀಶ್ (10ವರ್ಷ) ಬೆಳಗ್ಗಿನ ಜಾವ 5.30ರ ಹೊತ್ತಿಗೆ ಗೋಮತಿ ನಗರ ಎಕ್ಸ್ ಟೆನ್ಶನ್ ಪ್ರದೇಶದ ಸಮೀಪ ಸ್ಕೇಟಿಂಗ್ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಅತೀ ವೇಗದಲ್ಲಿ ಬಂದ ಎಸ್ ಯುವಿ ಬಾಲಕನಿಗೆ ಡಿಕ್ಕಿ ಹೊಡೆದು, ಆರೋಪಿಗಳು ಪರಾರಿಯಾಗಿದ್ದರು.
ಕೂಡಲೇ ಬಾಲಕ ನಿಮೀಶ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಎಸ್ ಯುವಿ ಚಾಲಕನ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಿದ್ದು, ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ಫೂಟೇಜ್ ಪರಿಶೀಲಿಸಿದ್ದರು.
ಪಿಟಿಐ ನ್ಯೂಸ್ ಏಜೆನ್ಸಿ ಪ್ರಕಾರ, ಎಸ್ ಯುವಿಯನ್ನು ಪತ್ತೆ ಹಚ್ಚಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಸಾರ್ಥಕ್ ಸಿಂಗ್ ಮತ್ತು ದೇವ್ ಶ್ರೀ ವರ್ಮಾ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.