Advertisement
ಕಣ್ಣೂರು ಮಕ್ಕಳ ದೇವರ ಮಠದ ಜಮೀನಲ್ಲಿ ಅಡಿಕೆ ಸಸಿಗಳಿಗೆ ಹನಿ ನೀರಾವರಿ ಅಳವಡಿಸಲು ಜೆಸಿಬಿ ಮೂಲಕ ಗುಂಡಿ ತೆಗೆಯುವಸಂದರ್ಭದಲ್ಲಿ ಜೆಸಿಬಿ ಯಂತ್ರಕ್ಕೆ ಕಲ್ಲಿನ ಚಪ್ಪಡಿ ಸ್ಕಿಕಿಹಾಕಿಕೊಂಡಿದೆ. ಅದನ್ನು ತೆಗೆದಾಗ ಅದರ ಕೆಳಗೆ ಹತ್ತು ಅಡಿ ಅಳದವರೆಗೆ ಗುಹೆಯಂತೆ ಅಚ್ಚುಕಟ್ಟಾದ ಸ್ಥಳದಲ್ಲಿ ತಾಮ್ರದ ತಟ್ಟೆಗಳು, ದೀಪಗಳು, ಉಯ್ಯಾಲೆ, ಚೈನ್, ವಿಭೂತಿ ಗಟ್ಟಿ, ಘಂಟೆ, ಮಂಗಳಾರತಿ ಉದಾಂಡ, ಕಮಂಡಲ, ಸರಪಳಿಗಳು, ನಾಗಭರಣ, ಜವಳಿಕುಣಿತಕ್ಕೆ ಬೇಕಾಗಿರುವ ಸಾಮಗ್ರಿಗಳು ಸಿಕ್ಕಿವೆ. ಒಟ್ಟು 100 ಕೆ.ಜಿ ತೂಕದ ಹಿತ್ತಾಳೆ, ಕಂಚು ಮುಟ್ಟಿನ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಮಠಾಧ್ಯಕ್ಷ ಡಾ.ಶ್ರೀಮೃತ್ಯಂಜಯ ಸ್ವಾಮೀಜಿ ತಿಳಿಸಿದ್ದಾರೆ.
Related Articles
ನಂಜರಾಜಯ್ಯ ಮಠಕ್ಕೆ ಹೋನ್ನಾಪುರ ಗ್ರಾಮವನ್ನು ಬಳುವಳಿಯಾಗಿ ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಹೋನ್ನಾಪುರ ಗ್ರಾಮದ
ಮುಂಭಾಗದಲ್ಲಿರುವ ಕ್ರಿ.ಶ. 1730ರ ಶಿಲಾ ಶಾಸನದಲ್ಲಿ ಮೈಸೂರಿನ ದಳವಾಯಿ ನಂಜರಾಜಯ್ಯ ಶ್ರೀಮಠಕ್ಕೆ ದಾನ ಮಾಡಿ, ಮಠದ
ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ ಎಂಬ ಉಲ್ಲೇಖವಿದೆ. ಅದಕ್ಕೆ ಸಂಬಂಧಿಸಿದಂತೆ ತಾಮ್ರ ಪತ್ರ ಚಿತ್ರದುರ್ಗದ ಮುರುಘ ಮಠದಲ್ಲಿ ಇಂದಿಗೂ ಶಾಸನದ ಪ್ರತಿ ಇದೆ ಎಂದು ತಿಳಿದುಬಂದಿದೆ.
Advertisement
ಕಣ್ಣೂರಿನ ಜಂಗಮ ಮಠದಲ್ಲಿ ಇಂದಿಗೂ ಆರು ಗದ್ದುಗೆಗಳಿವೆ.ಮಕ್ಕಳದೇವರಮಠ,ಬಸವಮಠಇತರೆಹೆಸರುಗಳಿಂದ ಕರೆಯಲಾಗುತ್ತಿದೆ. ಅಂದು ದಳವಾಯಿ ನಂಜರಾಜಯ್ಯ ಶ್ರೀಮಠಕ್ಕೆ ದಾನ ನೀಡಿದ ಜಮೀನಿನ ಸುತ್ತಲೂ ಅಂದಿನ ಜಂಗಮರು ಹಾಕಿಸಿದ್ದ ಲಿಂಗ ಮುದ್ರೆ ಕಲ್ಲುಗಳು ಇಂದಿಗೂ ಇವೆ. ಮಠದ ಇತಿಹಾಸಕ್ಕೆ ಮಹತ್ವದ ಸಾಕ್ಷಿ: ಇಂದಿಗೂ ಕಣ್ಣೂರಿನ ಮಕ್ಕಳ ದೇವರ ಮಠದ ಹೊಲದಲ್ಲಿ ಶರಣರು ತಪಗೈದಿದ್ದ ಗುಹೆ, ಯೋಗಮಂಟಪ,ಲಿಂಗ ಮುದ್ರೆಕಲ್ಲುಗಳು ಮಠದ ಐತಿಹಾಸಿಕ ಸ್ಮಾರಕವಾಗಿವೆ. ಪುರಾತನ ಮಠಕ್ಕೆ ಹೊಸರೂಪ ನೀಡಲು ಸಿದ್ಧತೆ ನಡೆಸಿದ್ದೇವೆ. ಇದೇ
ಸಮಯದಲ್ಲಿ ಗುಹೆ ಮತ್ತು ಪೂಜಾ ಸಾಮಗ್ರಿಗಳು ಪತ್ತೆಯಾಗಿರುವುದು ನಮ್ಮ ಮಠದ ಇತಿಹಾಸಕ್ಕೆ ಮಹತ್ವದ ಸಾಕ್ಷಿಯಾಗಿವೆ. ಪತ್ತೆಯಾಗಿರುವ ಸಾಮಗ್ರಿಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇತಿಹಾಸ ಸಂಶೋಧಕರನ್ನು ಕರೆಯಿಸಿ ಹೆಚ್ಚಿನ ಸಂಶೊಧನೆ ಮಾಡಿಸಲಾಗುವುದು, ಪತ್ತೆಯಾಗಿರುವ ಕಂಚು, ಹಿತ್ತಾಳೆ ಸಾಮಗ್ರಿಗಳನ್ನು ಸಂರಕ್ಷಿಸಲಾಗುವುದು ಎಂದು ಶ್ರೀಮಠದ ಮೃತ್ಯಂಜಯ ಸ್ವಾಮೀಜಿ ತಿಳಿಸಿದ್ದಾರೆ.