Advertisement

ಅನಂತನಾಗ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ : ಹೆಡ್ ಕಾನ್‌ಸ್ಟೆಬಲ್ ಹತ್ಯೆ

07:18 PM Jan 29, 2022 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಶನಿವಾರ ಸಂಜೆ 5.35 ರ ಗುಂಡಿನ ದಾಳಿ ನಡೆಸಿ ಹೆಡ್ ಕಾನ್‌ಸ್ಟೆಬಲ್ ಒಬ್ಬರನ್ನು ಹತ್ಯೆಗೈದಿದ್ದಾರೆ.

Advertisement

ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ಹಸನ್‌ಪೋರಾದಲ್ಲಿರುವ ನಿವಾಸದ ಬಳಿ ಹೆಡ್ ಕಾನ್‌ಸ್ಟೆಬಲ್ ಅಲಿ ಮೊಹಮ್ಮದ್ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲಿ ಮೊಹಮ್ಮದ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಆರಂಭಕ್ಕೂ ಮುನ್ನ ಅವರು ಕೊನೆಯುಸಿರೆಳೆದಿದ್ದರು.

ಜಮ್ಮು-ಕಾಶ್ಮೀರದ ಪೊಲೀಸರು ಭಯೋತ್ಪಾದಕ ದಾಳಿ ಸಂಚನ್ನು ವಿಫಲಗೊಳಿಸಿ, ದ ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಲಷ್ಕರ್ ಎ ತೊಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿರುವ ಮೂವರನ್ನು ಬಂಧಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next