Advertisement

ವಿಡಿಯೋ: ಪೊಲೀಸ್ ಅಧಿಕಾರಿಯ ಕೈಯಿಂದ ಹಾರಿದ ಗುಂಡು, ಮೊಬೈಲ್ ಶಾಪ್ ಸಿಬ್ಬಂದಿ ಸ್ಥಿತಿ ಗಂಭೀರ

10:09 AM Oct 20, 2022 | Team Udayavani |

ಪಂಜಾಬ್ : ಪೊಲೀಸ್ ಅಧಿಕಾರಿಯ ಕೈಯಲ್ಲಿದ್ದ ಬಂದೂಕಿನಿಂದ ಅಚಾನಾಕ್ಕಾಗಿ ಗುಂಡು ಹಾರಿ ಮೊಬೈಲ್ ಅಂಗಡಿಯಲ್ಲಿದ್ದ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.

Advertisement

ಈ ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮೊಬೈಲ್ ಅಂಗಡಿಯೊಂದಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅವರ ಪಕ್ಕದಲ್ಲಿದ್ದ ವ್ಯಕ್ತಿಗೆ ತಮ್ಮ ಬಂದೂಕಿನ ವಿವರಣೆಯನ್ನು ನೀಡುತ್ತಿರುವುದು ಕಂಡುಬಂದಿದೆ ಈ ವೇಳೆ ಅಚಾನಕ್ಕಾಗಿ ಬಂಧೂಕಿನಿಂದ ಗುಂಡು ಹಾರಿ ಅದು ಪಕ್ಕದಲ್ಲಿದ್ದ ಮೊಬೈಲ್ ಅಂಗಡಿಯ ಸಿಬ್ಬಂದಿಗೆ ತಗುಲಿದೆ, ಗಂಭೀರ ಗಾಯಗೊಂಡ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ, ಸದ್ಯ ಯುವಕನ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಕುರಿತು ಹೇಳಿಕೆ ನೀಡಿದ ಎಸಿಪಿ ಅಮರಿಂದರ್ ಸಿಂಗ್ ಘಟನೆಗೆ ಸಂಬಂಧಿಸಿ ವಿಡಿಯೋ ಪರಿಶೀಲನೆ ನಡೆಸಿ ನಿರ್ಲಕ್ಷ್ಯವಹಿಸಿದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೆಳೆಯುತ್ತಿದೆ ಗಾಯಾಳುಗಳ ಪಟ್ಟಿ: ವಿಶ್ವಕಪ್ ನಿಂದ ಹೊರಬಿದ್ದ ಆಸೀಸ್ ಕೀಪರ್

Advertisement
Advertisement

Udayavani is now on Telegram. Click here to join our channel and stay updated with the latest news.

Next