ಕಾಸರಗೋಡು: ಜಿಲ್ಲೆಯಲ್ಲಿ ವಿಧವೆಯರ ಸಹಿತ ದಿಕ್ಕಿಲ್ಲದ ಮಹಿಳೆಯರ ಜೀವನ ಸುಧಾರಿತಗೊಳಿಸುವ ಮತ್ತು ಸಂರಕ್ಷಣೆ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಮಹಿಳಾ ಸಂರಕ್ಷಣೆ ವಿಭಾಗ ವತಿಯಿಂದ ರಚಿಸಲಾದ “ಕೂಟ್(ಜತೆಗಾರ)’ ಯೋಜನೆಯ ಅಂಗವಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಷನ್ ಸಿದ್ಧವಾಗಿದೆ.
ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ
ಪತಿ ಮೃತ ಪಟ್ಟವರು, ಪತಿಯಿಂದ ವಿಚ್ಛೇದನ ಪಡೆದವರು, ಪತಿ ನಾಪತ್ತೆ ಯಾದವರು ಮೊದಲಾದವರ ಆಶ್ರಯವಿಲ್ಲದ ಮಹಿಳೆಯರಿಗೆ ಸಹಾಯ ಒದಗಿಸುವ ಯೋಜನೆ ಇದಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್, ನಗರಸಭೆಗಳಲ್ಲಿ ವಾರ್ಡ್ ಮಟ್ಟದಲ್ಲಿ ಈ ಆ್ಯಪ್ ಬಳಸಿ ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತೆಯರಿಗೆ ಹೊಣೆ ನೀಡಲಾಗಿದೆ. ಇಂಥಾ ಮಹಿಳೆಯರ ವ್ಯಕ್ತಿಗತ ಮಾಹಿತಿಗಳು, ಕುಟುಂಬ, ಶಿಕ್ಷಣಾರ್ಹತೆ, ಆರೋಗ್ಯದ ಮಟ್ಟ, ಪುನರ್ ವಿವಾಹ ಬಗ್ಗೆ ಆಸಕ್ತಿ ಸಹಿತ ಮಾಹಿತಿಗಳು ಸಮೀಪಕ್ಷೆಯಲ್ಲಿ ಸಂಗ್ರಹಿಸಲಾಗುವುದು. ಒಂದು ತಿಂಗಳ ಅವ ಧಿಯಲ್ಲಿ ಫೈನೆಕ್ಸ್‌ಸ್ಟ್ ಇನ್ನವೇಷನ್ ಎಂಬ ಸ್ಟಾರ್ಟ್ ಅಪ್ ಇಷನ್‌ನ ಸಹಾಯದೊಂದಿಗೆ ಕೂಟ್ ಯೋಜನೆ ಅಂಗವಾಗಿ ಮೊಬೈಲ್ ಆ್ಯಪ್ ತಯಾರಾಗಿದೆ. ಕನ್ನಡ, ಇಂಗ್ಲಿಷ್, ಮಲೆಯಾಳಂ ಭಾಷೆಗಳು ಆ್ಯಪ್ ನಲ್ಲಿವೆ.
ಎಲ್ಲ ಯೋಜನೆಗಳ ಮಾಹಿತಿಯೂ ಈ ಒಂದೇ ಆ್ಯಪ್ ನಲ್ಲಿರುವುದು ತುಂಬ ಆರೋಗ್ಯಕರ ಬೆಳವಣಿಗೆ. ಸಮೀಕ್ಷೆ ಪೂರ್ತಿಗೊಂಡು ಲಭಿಸಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ವಿವಿಧ ವಿಭಾಗಗಳ ನಿರ್ಗತಿಕ ಮಹಿಳೆಯರಿಗೆ ಕೇಂದ್ರ-ರಾಜ್ಯಸರಕಾರಗಳ ವ್ಯಾಪ್ತಿಯಲ್ಲಿ ಲಭಿಸಬೇಕಾದ ಸೌಲಭ್ಯ ಲಭ್ಯತೆಗೆ ಬೇಕಾದ ಕ್ರಮಕೈಗೊಳ್ಳಲಾಗುವುದು. ಜಾರಿಯಲ್ಲಿ ಸರಕಾರಿ ಯೋಜನೆಗಳಲ್ಲದೆ ವಿಧವಾ ಸಂರಕ್ಷಣೆ ಸಮಿತಿ ಮತ್ತು ಯೋಜನೆಯೊಂದಿಗೆ ಸಹಕರಿಸಲು ಸಿದ್ಧರಿರುವ ಸಂಘಟನೆಗಳ, ಎನ್.ಜಿ.ಒ.ಗಳ ಸಹಕಾರವನ್ನು ಕೋರಲಾಗುವುದು.
ಜಾರಿಯಲ್ಲಿರುವ ವಿವಿಧ ಸರಕಾರಿ ಯೋಜನೆಗಳ ವ್ಯಾಪ್ತಿಯಲ್ಲಿ ನೌಕರಿ, ಪರಿಣತಿ, ತರಬೇತು ಒದಗಿಸಿ ವಿಧವೆಯರನ್ನು ಸ್ವಾವಲಂಬಿಯಾಗಿಸುವ ಯತ್ನ ನಡೆಸಲಾಗುವುದು. ಜತೆಗೆ ಸ್ವಂತ ಉದ್ದಿಮೆ ಆರಂಭಿಸುವ ಇತ್ಯಾದಿ ಉದ್ದೇಶಗಳಿಗೆ ಬ್ಯಾಂಕ್ ಸಾಲ ಒದಗಿಸುವ ಕ್ರಮ ನಡೆಸಲಾಗುವುದು. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ನಡೆಸುವ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕ್ರಮವೂ ಈ ನಿಟ್ಟಿನಲ್ಲಿ ನಡೆಸಲಾಗುವುದು. ಪುನರ್ ವಿವಾಹದ ಬಗ್ಗೆ ಆಸಕ್ತಿಹೊಂದಿರುವ ಮಹಿಳೆಯರಿಗೆ ಬೇಕಾದ ಸಹಾಯವನ್ನೂ ಒದಗಿಸಲಾಗುವುದು.
ಈ ಸಂಬಂಧ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ “ಕೂಟ್’ ಅಪ್ಲಿಕೇಷನ್ ತರಬೇತಿ ಕಾರ್ಯಕ್ರಮ ಅಂಗವಾಗಿ “ಶ್ರದ್ಧಾ’ ಜನಜಾಗೃತಿ ವಿಚಾರ ಸಂಕಿರಣ ಜರಗಿತು. ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್ ಬಾಬು ಉದ್ಘಾಟಿಸಿದರು. ಫೆನ್ನೆಕ್ಸ್‌ಟ್ ಸಂಸ್ಥೆಯ ಪ್ರತಿನಿಧಿ ಅಭಿಲಾಷ್ ಸತ್ಯನ್ ನೇತೃತ್ವ ನೀಡಿದರು. ಮಹಿಳಾ ಕಲ್ಯಾಣ ಅ ಧಿಕಾರಿ ಎಂ.ವಿ. ಸುನಿತಾ, ಪಿ. ಶಶಿಕಂತ್ ಮೊದಲಾದವರು ಉಪಸ್ಥಿತರಿದ್ದರು.