Advertisement

ಕೋವಿಡ್ ತಡೆಗೆ ಸಮನ್ವಯತೆ ಅಗತ್ಯ

11:01 AM Jul 14, 2020 | Suhan S |

ಕೆಜಿಎಫ್: ಕೋವಿಡ್ ತಡೆಗಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್‌ ಕೆ.ರಮೇಶ್‌ ಹೇಳಿದರು.

Advertisement

ನಗರದಲ್ಲಿನ ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೋವಿಡ್ ಎಲ್ಲೆಡೆ ಹರಡುತ್ತಿದೆ. ಅದನ್ನು ತಡೆಯುವುದು ಎಲ್ಲರ ಸವಾಲಾಗಿದೆ. ಪ್ರತಿ ವಾರವೂ ತಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಕೆಲಸಗಳನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ನಗರಸಭೆ ಆಯುಕ್ತ ಸಿ.ರಾಜು ಮಾತನಾಡಿ, ಬಡಾವಣೆಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ 9035713489 ನಂಬರ್‌ಗೆ ಫೋನ್‌ ಮಾಡಿ. ಕೋವಿಡ್ ವೈರಸ್‌ ಇರುವ ಸ್ಥಳಗಳನ್ನು ಕೂಡಲೇ ಸೀಲ್‌ ಡೌನ್‌ ಮಾಡಲಾಗುತ್ತದೆ. ಈಗಾಗಲೇ ಬಡಾವಣೆಗಳನ್ನು ಶುದ್ಧೀಕರಣ ಮಾಡಲಾಗುತ್ತಿದೆ. ಎಲ್ಲಾ ಅಧಿಕಾರಿಗಳುಸಮನ್ವಯತೆಯಿಂದ ಕೆಲಸ ಮಾಡಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಸುನಿಲ್‌ ಕುಮಾರ್‌ ಮಾತನಾಡಿ, ಕೋವಿಡ್ ವೈರಸ್‌ ತಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆಯನ್ನು ಜನತೆ ತೆಗೆದುಕೊಳ್ಳಬೇಕು ಎಂದರು. ವ್ಯವಸ್ಥಾಪಕ ಜಯರಾಂ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next