Advertisement

ಸಂವಿಧಾನ ಜಾರಿ ದಿನಾಚರಣೆ ಯಶಸ್ಸಿಗೆ ಸಹಕರಿಸಿ

09:21 AM Jan 11, 2019 | Team Udayavani |

ಬೀದರ: ಸಂವಿಧಾನ ಜಾರಿಗೆ ಬಂದ ದಿನದ ಪ್ರಯುಕ್ತ ನಗರದಲ್ಲಿ ಜ.26ರಂದು ನಡೆಯಲ್ಲಿರುವ ಬೃಹತ್‌ ಬಹಿರಂಗ ಕಾರ್ಯಕ್ರಮ ಯಶಸ್ಸಿಗಾಗಿ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಅಮೃತರಾವ್‌ ಚಿಮಕೊಡೆ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಂವಿಧಾನ ಸಂರಕ್ಷಣ ಸಮಿತಿ ವತಿಯಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.26ರಂದು ನಡೆಯಲಿರುವ ಸಂವಿಧಾನ ಜಾರಿಗೆ ಬಂದ ದಿನದ ಬೃಹತ್‌ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಸೇರಿ ಸಂವಿಧಾನದ ಸದಾಶಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಸಂವಿಧಾನ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ ಮಾತನಾಡಿ, ಜ.26ರಂದು ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸಂವಿಧಾನ ಜಾರಿಗೆ ಬಂದ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ತರ ಪ್ರದೇಶದ ಮಾಜಿ ಸಂಸದೆ ಸಾವಿತ್ರಿಬಾ ಫುಲೆ, ನವದೆಹಲಿಯ ಜಮಾಯತ್‌ ಉಲ್‌ ಉಲ್ಮಾ ಹಿಂದ್‌ ಕಾರ್ಯದರ್ಶಿ ಆಸಜದ್‌ ಮದಾನಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ್‌, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಕ್ರೀಡಾ ಸಚಿವ ರಹೀಮ್‌ ಖಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಅನೇಕ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲ್ಲಿದ್ದಾರೆ ಎಂದು ತಿಳಿಸಿದರು.

ಸಮಿತಿಯ ಗೌರವಾಧ್ಯಕ್ಷ ಆನಂದ ದೇವಪ್ಪ, ಬೃಹತ್‌ ಬಹಿರಂಗ ಸಭೆಯ ಪೂರ್ವದಲ್ಲಿ ಎಲ್ಲ ಶೋಷಿತ ಸಮಾಜ, ಸಂವಿಧಾನ ಪ್ರೇಮಿಗಳು, ಬುದ್ಧಿ ಜೀವಿಗಳು, ಯುವ ಸಮುದಾಯದವರನ್ನು ಒಂದಡೆ ಸೇರಿಸಿ ಸಭೆ ನಡೆಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಲಹೆ ನೀಡಿದರು.

Advertisement

ಮುಖಂಡರಾದ ರಾಜು ಕಡ್ಯಾಳ, ಅಬ್ದುಲ್‌ ಮನಾನ್‌ಸೇs್, ಶ್ರೀಕಾಂತ ಸ್ವಾಮಿ, ಬಸವರಾಜ ಮಾಳಗೆ, ಗೋವರ್ಧನ ರಾಠೊಡ್‌, ಲತಾ ರಾಠೊಡ್‌, ಕೆ.ಡಿ. ಗಣೇಶ, ಅಬ್ದುಲ್‌ ಮುಲನ್‌, ಡಾ| ಮಹ್ಮದ್‌ ರಫಿ, ರಮೇಶ ಕಟ್ಟೆತುಗಾಂವ, ಅರುಣ ಕುದರೆ, ಯಶಪಾಲ ಬೊರೆ, ಶಿವಕುಮಾರ ನೀಲಕಟ್ಟಿ, ಶಾಲಿವಾನ ಬಡಿಗೇರ್‌, ಬಾಬುರಾವ್‌ ವಿಠಾರೆ, ಅಂಬಾದಾಸ ಗಾಯಕವಾಡ, ಓಂಪ್ರಕಾಶ ಭಾವಿಕಟ್ಟಿ, ಅಂಬರೀಶ ಕುದರೆ, ಪವನ ಗುನ್ನಳಿಕರ್‌, ಪ್ರದೀಪ ನಾಟೇಕರ್‌, ಮಹೇಶ ಮೂರ್ತಿ, ಸುರೇಶ ಜೋಳನಾಳಕರ್‌, ಪ್ರಬುರಾವ ತರನಳ್ಳಿ, ತುಕಾರಾಮ ಚಿಮಕೋಡ, ಸಂಜುಕುಮಾರ ಮೇದಾ, ಜಗನ್ನಾಥ ಮಾನೆ, ಸುರೇಶ ಹೇಳವ, ನಾಗಶೆಟ್ಟಿ ಚಿದ್ರಿ, ಅರುಣ ಕಾಂಬಳೆ, ಲೋಕೇಶ ಮೇತ್ರೆ, ವೆಂಕಟೇಶ ಮೇದಾ, ಶರಣಪ್ಪಾ ಚಂದನ್ನಹಳ್ಳಿ, ಸುಭಾಷ ಹಳ್ಳಿಖೇಡ್‌, ಸೂರ್ಯಕಾಂತ ಕಮಠಾಣಾ, ಕಾಂತರಾಜ ಡೇವಿಡ್‌, ಜಗನ್ನಾಥ ಕಾರಾಮುಂಗೆ, ರಘುನಾಥ ಮರಖಲ್‌, ಪಿರಾಜಿ ಬಿರಾದಾರ್‌, ವಿಠಲ ಕುಂಬಾರ, ಶ್ರೀನಿವಾಸ ವಿಶ್ವಕರ್ಮ, ಮೋಹನ ಡಾಂಗೆ, ಮಹೇಶ ಗೋರನಾಳಕರ್‌, ಸುರೇಶ ಟಾಕಳೆ, ಬಾಬುರಾವ ಕೂನಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next