ರಾಮನಗರ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆ.ಆರ್.ಐ.ಡಿ. ಎಲ್) ಅಧ್ಯಕ್ಷರಾಗಿ ನೇಮಕಗೊಂಡ ನಂತರ ತಾಲೂ ಕಿನ ಎಸ್.ಆರ್.ಎಸ್. ಬೆಟ್ಟಕ್ಕೆ ಭೇಟಿ ನೀಡಿದ್ದ ಎಂ. ರುದ್ರೇಶ್ ಅವರನ್ನು ಬಿಜೆಪಿ ಪ್ರಮುಖರು ಮತ್ತು ಅವರ ಅಭಿಮಾನಿಗಳು ಅಭಿನಂದಿಸಿದರು.
ಕುಟುಂಬ ಸಮೇತನ ಎಸ್.ಆರ್.ಎಸ್. ಬೆಟ್ಟದಲ್ಲಿರುವ ಶ್ರೀ ರೇವಣ ಸಿದ್ದೇಶ್ವರರು, ಮರಳಸಿದ್ದೇಶ್ವರ, ಭೀಮೇಶ್ವರ, ವೀರಭದ್ರಸ್ವಾಮಿ ಮತ್ತು ರೇಣುಕಾಂಭ ದೇವರುಗಳ ದರ್ಶನ ಪಡೆದುಕೊಂಡರು. ನಂತರ ಕ್ಷೇತ್ರದ ಹಿರಿಯ ಶ್ರೀಗಳಾದ ಬಸವಲಿಂಗರಾಜ ಸ್ವಾಮೀಜಿ, ಕಿರಿಯ ಶ್ರೀಗಳಾದ ರಾಜಶೇಖರ ಶಿವಾ ಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಕೊಂಡರು.
ಬೆಟ್ಟದ ಅಭಿವೃದ್ಧಿಗೆ ಸಹಕಾರ: ಈ ವೇಳೆ ಸ್ಥಳೀಯ ಭಕ್ತರು, ನಾಗರೀಕರು ಮತ್ತು ಬಿಜೆಪಿ ಕಾರ್ಯಕರ್ತರು ಶ್ರೀ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಸೆಳೆದರು. ರಾಜ್ಯಾದ್ಯಂತ ರೇವಣಸಿದ್ದೇಶ್ವರರಿಗೆಭಕ್ತ ವೃಂದವಿದ್ದು, ಇಲ್ಲಿ ಇನ್ನಷ್ಟು ಮೂಲ ಸೌಕರ್ಯಗಳ ಅಗತ್ಯವಿದೆ ಎಂದು ಗಮನ ಸೆಳೆದರು. ಯಾತ್ರಾಸ್ಥಳವಾಗಿ ರೂಪುಗೊಳ್ಳಬೇಕಾಗಿದೆ ಎಂದರು.
ಸಕರಾತ್ಮಕವಾಗಿ ಸ್ಪಂದನೆ: ಇದಕ್ಕೆ ಸ್ಪಂದಿಸಿದ ಎಂ.ರುದ್ರೇಶ್, ತಾವು ಈಗಾಗಲೇ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಗಮನ ಸೆಳೆದಿರುವುದಾಗಿ, ಮುಖ್ಯ ಮಂತ್ರಿಗಳು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಶ್ರೀ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿದೆ, ಪ್ರವಾಸಿ ತಾಣವಾಗಿ ರೂಪಿಸಲು ತಾವು ಪ್ರವಾಸೋದ್ಯಮ ಸಚಿವರ ಬಳಿಯೂ ಮಾತನಾಡುವುದಾಗಿ ತಿಳಿಸಿದರು. ಕೈಲಾಂಚ ಹೋಬಳಿ ಬಿಜೆಪಿ ಅಧ್ಯಕ್ಷ ಅವ್ವೆರಹಳ್ಳಿ ಪ್ರಶಾಂತ್, ರಾಮನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್. ಮುರಳೀಧರ್, ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ಸದಸ್ಯಕಾಡನಕುಪ್ಪೆರಾಘವೇಂದ್ರ, ಕಾಳಯ್ಯ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಪ್ರವೀಣ್ ಗೌಡ, ಮಾಜಿ ನಗರಸಭಾ ಸದಸ್ಯ ಬಿ. ನಾಗೇಶ್ ಕನಕಪುರ ಪ್ರಾಧಿಕಾರ ಅಧ್ಯಕ್ಷ ಜಗನ್ನಾಥ್, ಮುಖಂಡರಾದ ಜಿ.ಬಿ. ಪದ್ಮನಾಭ್, ಡಿ. ನರೇಂದ್ರ, ಶಿವಲಿಂಗಯ್ಯ, ಕಿರಣ್, ಹನುಮೇಶ್, ಪ್ರಭು, ಶಿವಸ್ವಾಮಿ, ನಾಗರಾಜು, ಕೃಷ್ಣ, ಸತೀಶ್, ಲೋಕೇಶ್ ಮುಂತಾದವರು ಹಾಜರಿದ್ದರು.
ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳಿಂದ ಆಗಮಿಸಿದ್ದ ಪಕ್ಷದಕಾರ್ಯಕರ್ತರು ಅವರನ್ನು ಅಭಿನಂದಿಸಿದರು.