Advertisement

ಪಾಲಿಕೆಯಲ್ಲಿ ಗಂಭೀರ ವಾಗ್ವಾದದ ನಡುವೆ ಕಣ್ಣೋಟದ ದೃಶ್ಯ ವೀಕ್ಷಣೆ 

12:34 PM Feb 16, 2018 | Team Udayavani |

ಮಂಗಳೂರು: ಮಹಾನಗರ ಪಾಲಿಕೆಯೆ ಸಭೆಯಲ್ಲಿ ಗಂಭೀರ ಸಮಸ್ಯಗಳ ಕುರಿತಾಗಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಶುಕ್ರವಾರ  ಗಂಭೀರ ವಾಗ್ವಾದ ನಡೆಯುತ್ತಿದ್ದ ವೇಳೆ ಪಾಲಿಕೆ ಸದಸ್ಯರೊಬ್ಬರು ವಿಶ್ವಾದ್ಯಂತ ವೈರಲ್‌ ಆದ ಕಣ್ಣೋಟದ ವಿಡಿಯೋವನ್ನು ವೀಕ್ಷಿಸುತ್ತಿರುವುದು ಖಾಸಗಿ ವಾಹಿನಿಯ ಕ್ಯಾಮಾರದಲ್ಲಿ ಸೆರೆಯಾಗಿದೆ. 

Advertisement

ಪಾಲಿಕೆಯ ಕಾಂಗ್ರೆಸ್‌ ಸದಸ್ಯ  ನವೀನ್‌ ಡಿ ಸೋಜಾ ಚರ್ಚೆ ಬಗ್ಗೆ ತಲೆಕೆಡಿಸಿಕೊಳ್ಳದೆ ವೈರಲ್‌ ಆಗಿದ್ದ ಒರು ಅಡಾರ್‌ ಲವ್‌ ಚಿತ್ರದ ಪ್ರಿಯಾ ಪ್ರಕಾಶ್‌ ವಾರಿಯರ್‌ ಅವರ ಕಣ್ಣು ಹೊಡೆಯುವ ದೃಶ್ಯವನ್ನು ವೀಕ್ಷಿಸುತ್ತಾ ಮೈಮರೆತಿದ್ದರು.

ಮಾಧ್ಯಮಗಳು ಚಿತ್ರೀಕರಿಸುವುದು ಗಮನಕ್ಕೆ ಬರುತ್ತಿದ್ದಂತೆ ನವೀನ್‌ ಮೊಬೈಲ್‌ ಆಫ್ ಮಾಡಿ ಕುಳಿತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next