Advertisement

ತೂಕ ಇಳಿಕೆಗೆ ಸಹಕಾರಿ ಐಸ್‌ ಡಯೆಟ್‌

03:40 PM Jun 10, 2019 | mahesh |

ದೇಹದ ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯೋಗಗಳಿಗೆ ಮುಂದಾಗುತ್ತಾರೆ. ಆದರೆ ಆ ಪ್ರಯೋಗಗಳು ಅವರ ಯೋಜನೆಗೆ ಸಾಥ್‌ ನೀಡುತ್ತವೆ ಎಂದು ಹೇಳಲಾಗದು. ಹಲವು ಡಯೆಟ್‌ ಪ್ಲಾನ್‌ಗಳನ್ನು ಮೊರೆ ಹೋಗುವ ಡಯೆಟಿಗರಿಗೆ ಇನ್ನೊಂದು ಹೊಸ ಯೋಜನೆ ಇದೆ.
ಅದುವೇ ಐಸ್‌ ಡಯೆಟ್‌. ಒಂದು ಗ್ಲಾಸ್‌ಗೆ ಒಂದು ಅಥವಾ ಎರಡು ಐಸ್‌ ಕ್ಯೂಬ್‌ಗಳನ್ನು ಹಾಕಿ ಆ ನೀರನ್ನು ಕುಡಿಯಬೇಕು. ಇದು ದಾಹವನ್ನು ತಗ್ಗಿಸುವಲ್ಲಿ ಸಹಾಯ ಮಾಡುವುದು ಮಾತ್ರವಲ್ಲದೇ ದೇಹದ ತೂಕ ಇಳಿಸಿಕೊಳ್ಳುವಲ್ಲಿ ಸಹಕರಿಸುತ್ತದೆ. ಆಶ್ಚರ್ಯವಾಗಬಹುದು ಬ್ರೈನ್‌ ವೀನರ್‌ ಎಂಬ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಐಸ್‌ ಡಯೆಟ್‌ ಒಂದು ತೂಕ ಇಳಿಸುವಿಕೆಯ ಯೋಜನೆ ಸೃಷ್ಟಿಸಿದ್ದಾರೆ. ಈ ಡಯೆಟ್‌ನಲ್ಲಿ ಐಸ್‌ ಕ್ಯೂಬ್‌ಗಳ ಸೇವೆನೆ ಒಳಗೊಂಡಿದೆ. ಈ ಡಯೆಟ್‌ ವೇಳೆ ದೊಡ್ಡ ಪ್ರಮಾಣದಲ್ಲಿ ಐಸ್‌ ಕ್ಯೂಬ್‌ಗಳ ಸೇವೆನೆ (ದಿನ ಕನಿಷ್ಠ ಒಂದು ಲೀಟರ್‌) ಸ್ವಲ್ಪ ತೂಕವನ್ನು ಕಡಿಮೆಗೊಳಿಸಿತ್ತದೆ.

Advertisement

ಐಸ್‌ ಡಯೆಟ್‌ನ ಪರಿಣಾಮ
ಐಸ್‌ ಡಯೆಟ್‌ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮಂಜನ್ನು ಕರಗಿಸಲು ದೇಹಕ್ಕೆ ಸಾಕಷ್ಟು ಶಕ್ತಿಯ ಅಗತ್ಯವಿದೆ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದ ಶಕ್ತಿ ಬರ್ನ್ ಆಗುವುದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗುತ್ತದೆ. ಇದರೊಂದಿಗೆ ಹೆಚ್ಚಿನ ಪ್ರಮಾಣದ ಐಸ್‌ ಸೇವನೆ ಹೊಟ್ಟೆ ಪೂರ್ಣಗೊಂಡ ಭಾವನೆಯನ್ನು ಸೃಷ್ಟಿಸುತ್ತದೆ. ಇದರಿಂದ ಹೆಚ್ಚು ಆಹಾರ ಸೇವಿಸುವ ಅಗತ್ಯ ಬೀಳುವುದಿಲ್ಲ. ಆಹಾರ ಸೇವನೆಗೆ ಮಿತಿ ಬೀಳುತ್ತದೆ.

ಅನುಸರಿಸುವ ವಿಧಾನ
ಐಸ್‌ ಡಯೆಟ್‌ ಅನುಸರಿಸಬೇಕಾದ ವಿಧಾನ ಈ ಕೆಳಗಿನಂತಿದೆ
·  ಚಹಾದಲ್ಲಿ ಐಸ್‌ ಕ್ಯೂಬ್‌ ಬೆರೆಸಿ
·  ಊಟದ ಬಳಿಕ ಐಸ್‌ ಕ್ಯೂಬ್‌ ತಿನ್ನಿ
·  ನೀರಿಗೂ ಐಸ್‌ ಕ್ಯೂಬ್‌ ಸೇರಿಸಿ
·  ಹಸಿವಾದಾಗ ಪುಡಿಮಾಡಿದ ಐಸ್‌ ಕ್ಯೂಬ್‌ಗಳನ್ನು ಸೇವಿಸಿ
ಇಷ್ಟು ಮಾತ್ರವಲ್ಲದೇ ತೂಕ ಇಳಿಕೆಗೆ ಐಸ್‌ ಕ್ಯೂಬ್‌ಗಳನ್ನು ಬೇರೆ ವಿಧಾನದಲ್ಲೂ ಬಳಸಬಹುದು. ಅವುಗಳೆಂದರೆ :
·  ಸೊಂಟದ ಸುತ್ತ ಐಸ್‌ ಪ್ಯಾಕ್‌ ಇಡುವುದು: ಕೆಲವು ಐಸ್‌ ಕ್ಯೂಬ್‌ಗಳನ್ನು ತೆಗೆದುಕೊಂಡು ಸೊಂಟದ ಸುತ್ತ ಕಟ್ಟಿಕೊಳ್ಳಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೇ ಬಿಡಿ. ಐಸ್‌ ಕ್ಯೂಬ್‌ ಕರಗುವ ವೇಳೆ ಹೆಚ್ಚಿನ ಪ್ರಮಾಣದ ಶಕ್ತಿ ಬಿಡುಗಡೆಯಾಗಿ ಕೊಬ್ಬು ಕರಗಲು ಸಹಕರಿಸುತ್ತದೆ.
·  ತಂಪು ನೀರಿನ ಸ್ನಾನ: ದೇಹದ ತೂಕ ಇಳಿಸಿಕೊಳ್ಳಲು ತಂಪು ನೀರಿನ ಸ್ನಾನ ಪರಿಣಾಮಕಾರಿ. ಇದು ಚಯಾಪಚಯ ಕ್ರಿಯೆಗೆ ಸಹಕಾರಿ ಮತ್ತು ದೇಹದ ತೂಕಕ್ಕೆ ಇಳಿಕೆ ಕಾರಣವಾಗಿದೆ. ನೀರಿನ ಬಕೆಟಿಗೆ ಕೆಲವು ಐಸ್‌ ಕ್ಯೂಬ್‌ಗಳನ್ನು ಹಾಕಿ ಸ್ನಾನ ಮಾಡಬಹುದು.

ಅಡ್ಡ ಪರಿಣಾಮ
·  ಒಂದು ವೇಳೆ ಐಸ್‌ ಡಯೆಟ್‌ ನಿಲ್ಲಿಸಿದರೇ ದೇಹದ ತೂಕ ಹೆಚ್ಚಾಗುವ ಸಾಧ್ಯತೆಗಳಿವೆ
·  ಐಸ್‌ ಕ್ಯೂಬ್‌ ನಿರಂತರವಾಗಿ ಜಗಿಯುವುದರಿಂದ ಹಲ್ಲುಗಳಿಗೆ ಹಾನಿಕಾರಕವಾಗಬಹುದು.
·  ಹೆಚ್ಚಿನ ಪ್ರಮಾಣದ ಐಸ್‌ ಕ್ಯೂಬ್‌ ಉಷ್ಟತೆಗೆ ಸವಾಲಿ, ಕೆಲವು ಅಂಗಗಳ ಕಾರ್ಯಚಟುವಟಿಕೆಗೆ ಸಮಸ್ಯೆಯಾಗಬಹುದು.
·  ಐಸ್‌ ಕ್ಯೂಬ್‌ಗಳಲ್ಲಿ ಅತ್ಯಂತ ತಣ್ಣನೆಯ ಹಾಗೂ ಅತ್ಯಂತ ಬಿಸಿಯಾದ ವಾತಾವರಣದಲ್ಲಿ ಸೇವಿಸಬಾರದು.

-   ಆರ್‌.ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next