Advertisement

‘ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಅಗತ್ಯ ನೆರವು ನೀಡುವಂತಾಗಲಿ’

01:13 AM Jul 10, 2019 | sudhir |

ಮಡಿಕೇರಿ :ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೆ ಸಿಲುಕಿದ‌ ಸಂತ್ರಸ್ತ ಸಹಕಾರಿಗಳಿಗೆ ಪರಿಹಾರ ವಿತರಣ ಕಾರ್ಯಕ್ರಮವು ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ವತಿಯಿಂದ ಸೋಮವಾರ ನಡೆಯಿತು.

Advertisement

ನಗರದ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತ ಸಹಕಾರಿಗಳಿಗೆ ಚೆಕ್‌ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕೆಟೋಳಿ ಸಿ.ಯತೀಶ್‌ ಕುಮಾರ್‌ ಅವರು ಸಹಕಾರ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯವನ್ನು ರೈತರಿಗೆ ನೀಡುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ಕೃಷಿಕರ ಆರ್ಥಿಕ ಚಟುವಟಿಕೆ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಅಗತ್ಯ ನೆರವು ನೀಡಬೇಕಿದೆ. ಆ ನಿಟ್ಟಿನಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಬೇಕು. ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಕೊಡಗಿನ ಡಿಸಿಸಿ ಬ್ಯಾಂಕ್‌ ಉತ್ತಮ ಆಗಿದೆ ಎಂದು ಅವರು ಹೇಳಿದರು.

ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಿದ್ದಲ್ಲಿ ಅವರಿಗೆ ವಿಶೇಷ ಆದ್ಯತೆ ನೀಡುವುದರ ಜತೆಗೆ ಸಹಾಯಧನ ಕಲ್ಪಿಸಲಾಗುತ್ತದೆ ಎಂದು ಯತೀಶ್‌ ಕುಮಾರ್‌ ಅವರು ಹೇಳಿದರು.

Advertisement

ಸಾಲ ಮನ್ನಾ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಸಹಕಾರ ಇಲಾಖೆ ಅಧಿಕಾರಿಗಳು ಅರ್ಹರು ಬಿಟ್ಟು ಹೋಗಿದ್ದಲ್ಲಿ ಗುರುತಿಸಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದರು. ಸಂಕಷ್ಟಕ್ಕೊಳಗಾದ ಮಡಿಕೇರಿ, ಮಕ್ಕಂದೂರು, ಮಾದಾಪುರ, ಗರ್ವಾಲೆ, ಐಗೂರು, ಚೌಡ್ಲು, ಶಾಂತಳ್ಳಿ, ಮದೆನಾಡು ಮತ್ತು ಪಯಶ್ವಿ‌ನಿ ಸಹಕಾರ ಸಂಘಗಳ ಶೇ.50ರಷ್ಟು ದೇಣಿಗೆಯನ್ನು ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ವಾಪಸು ನೀಡಿದ್ದು, ಉಳಿದ ಸಹಕಾರ ಸಂಘಗಳ ಬಾಬ್ತು ರೂ.1.03 ಕೋಟಿಯನ್ನು ಸಂತ್ರಸ್ತರ ನಿಧಿಗೆ ದೇಣಿಗೆಯಾಗಿ ಪಡೆಯಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರಾದ ಕೆ.ಹರೀಶ್‌ ಪೂವಯ್ಯ, ನಿರ್ದೇಶಕರಾದ ಬಿ.ಡಿ.ಮಂಜುನಾಥ, ಮನುಮುತ್ತಪ್ಪ, ಹೊಸೂರು ಸತೀಶ್‌ ಕುಮಾರ್‌, ಬಿ.ಕೆ.ಚಿಣ್ಣಪ್ಪ, ಉಷಾ ತೇಜಸ್ವಿ, ಎಚ್.ಎಂ.ರಮೇಶ್‌, ರಘು ನಾಣಯ್ಯ, ಭರತ್‌ ಕುಮಾರ್‌, ಕನ್ನಂಡ ಸಂಪತ್‌, ಜಗದೀಶ್‌, ನಬಾರ್ಡ್‌ನ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಾದ ಕೆ.ಎಲ್.ಬಾಲಚಂದ್ರ, ಸಹಕಾರ ಇಲಾಖೆಯ ಸ. ನಿಬಂಧಕರಾದ ರವಿಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next