Advertisement
ನಗರದಲ್ಲಿ ಹಮ್ಮಿಕೊಂಡ ಮೂರು ದಿನಗಳ ನ್ಯಾನೊ ಬೆಂಗಳೂರು 10ನೇ ಆವೃತ್ತಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಉದಯೋನ್ಮುಖ ಉದ್ಯಮವಾದ ಈ ನ್ಯಾನೊ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ.
Related Articles
Advertisement
ಬೆಂಗಳೂರು ಸಂಶೋಧನೆಗಳ ರಾಜಧಾನಿ. ನಗರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಜವಾಹರಲಾಲ್ ನೆಹರು ಮುಂದುವರಿದ ವಿಜ್ಞಾನ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್)ನಂತಹ ಪ್ರತಿಷ್ಠಿತ ಸಂಸ್ಥೆಗಳು ದಶಕಗಳಿಂದ ಇಲ್ಲಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಈಗ ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲೂ ಈ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ ಎಂದರು.
ಸಂಶೋಧನೆಗೆ ಸಲಹೆ: ಭಾರತರತ್ನ ಡಾ.ಸಿ.ಎನ್.ಆರ್.ರಾವ್ ಮಾತನಾಡಿ, ಅಂತಿಮ ಹಂತದಲ್ಲಿ ಪತ್ತೆಯಾಗುವ ಕ್ಯಾನ್ಸರ್ ಪ್ರತಿ ವರ್ಷ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದನ್ನು “ನ್ಯಾನೊ ನೋಸ್’ ಮೂಲಕ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಸಾಧ್ಯ ಇದೆ.
ಈ ನಿಟ್ಟಿನಲ್ಲಿ ನಗರದ ರಾಷ್ಟ್ರೀಯ ನ್ಯಾನೊ ತಂತ್ರಜ್ಞಾನ ಸಂಸ್ಥೆ ಸಂಶೋಧನೆ ನಡೆಸುವ ಅಗತ್ಯ ಇದೆ ಎಂದು ಹೇಳಿದರು. ಮಾಹಿತಿ ತಂತ್ರಜ್ಞಾನ (ಐಟಿ) ಒಂದು ಸಣ್ಣ ಭಾಗವಷ್ಟೇ. ಆದರೆ, ವಿಜ್ಞಾನ ಎನ್ನುವುದು ದೊಡ್ಡ ಸಾಗರ. ಆದ್ದರಿಂದ ಮುಖ್ಯಮಂತ್ರಿಗಳು ಐಟಿ ಬಗ್ಗೆ ಮಾತನಾಡುವಾಗ, ವಿಜ್ಞಾನವನ್ನು ಮರೆಯಬೇಡಿ ಎಂದು ಸೂಚ್ಯವಾಗಿ ಹೇಳಿದ ಪ್ರೊ.ರಾವ್, ಕಳೆದ ಆರು ದಶಕಗಳಿಂದ ನಾನು ವಿಜ್ಞಾನ ಕ್ಷೇತ್ರದಲ್ಲಿದ್ದೇನೆ.
ಈಗಲೂ ನಾನು ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸುತ್ತಲೇ ಇದ್ದೇನೆ. ಈಗಲೂ ಅನೇಕ ಗೊತ್ತಿರದ ಸಂಗತಿಗಳು ನನ್ನ ಗಮನಕ್ಕೆ ಬರುತ್ತಿರುತ್ತವೆ. ಇದು ವಿಜ್ಞಾನದ ವೈಶಿಷ್ಟ ಎಂದು ತಿಳಿಸಿದರು. ಅಮೆರಿಕದ ನ್ಯಾನೊಮಟೀರಿಯಲ್ಸ್ ಗ್ರೂಪ್‌ನ ಡಾ.ಯೂರಿ ಗಾಗೊತ್ಸಿ ಮಾತನಾಡಿ, ನ್ಯಾನೊ ಗಾತ್ರ ಚಿಕ್ಕದು.
ಆದರೆ, ಅದರ ಹಿಂದೆ ದೊಡ್ಡ ಮಾರುಕಟ್ಟೆ ಇದೆ. ಭವಿಷ್ಯದಲ್ಲಿ ಅದೊಂದು ದೈತ್ಯ ಉದ್ಯಮ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್, ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಐಎನ್‌ಎಸ್‌ಎ) ಅಧ್ಯಕ್ಷ ಪ್ರೊ.ಎ.ಕೆ. ಸೂದ್ ಮತ್ತಿತರರು ಉಪಸ್ಥಿತರಿದ್ದರು.