ರಾಮನಗರ: ಕೋವಿಡ್ ಸೋಂಕು ಹರಡುವಿಕೆ ತಡೆಯಲು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದೇ ಉಪಾಯ ಎಂದು ಜಿಪಂ ಸದಸ್ಯ ಎಚ್.ಎನ್.ಅಶೋಕ್ (ತಮ್ಮಾಜಿ) ಹೇಳಿದರು. ತಾಲೂಕಿನ ಕೂಟಗಲ್ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ ಪ್ರತಿ ಮನೆಗೂ ವಿತರಿಸಲು 10 ಸಾವಿರ ಮಾಸ್ಕ್ಗಳನ್ನು ಯರೇಹಳ್ಳಿ ವಿಎಸ್‌ಎಸ್‌ಎನ್ ಕಾರ್ಯಾಲಯದ ಸಭಾಂಗಣದಲ್ಲಿ ಮುಖಂಡರಿಗೆ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಮತ್ತು
ಆಗಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಮತ್ತು ಲಾಕ್‌ಡೌನ್ ನಿಯಮಗಳನ್ನು ಪಾಲಿಸಿ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದ್ದು, ದಿನನಿತ್ಯ ಅತ್ಯಗತ್ಯವಾಗಿ ಮನೆಯಿಂದ ಹೊರಗಡೆ ಹೋಗುವವರಿಗೆ ಅನುಕೂಲವಾಗುವಂತೆ ಮಾಸ್ಕ್ ವಿತರಿಸಲಾಗುತ್ತಿದೆ. ಹಾಲು ಉತ್ಪಾದಕರ ಸಂಘಗಳಿಂದ ಸಂಘದ ಸದಸ್ಯರಿಗೆ ಈಗಾಗಲೇ 3 ಸಾವಿರ ಮಾಸ್ಕ್ ವಿತರಿಸಿರುವುದಾಗಿ ಅವರು ತಿಳಿಸಿದರು. ಲಕ್ಷ್ಮೀಪುರ ಗ್ರಾಪಂ ಮೆಳೆಹಳ್ಳಿ ದೊಡ್ಡಿ, ಚಿಕ್ಕಸೂಲಿಕೆರೆ, ಇರುಳಿಗರ ಕಾಲೋನಿ ಮತ್ತು ದೊಡ್ಡಗಂಗವಾಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ಟ್ಯಾಂಕರ್‌ಗಳಿಂದ
ನೀರು ಸರಬರಾಜಿಗೆ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಟಾಸ್ಕ್ ಫೋರ್ಸ್‌ನ ತಾಲೂಕು ಅಧ್ಯಕ್ಷ ಕೆ.ರಮೇಶ್, ತಾಪಂ ಮಾಜಿ ಅಧ್ಯಕ್ಷ ಎಸ್.ಟಿ.ಕಾಂತರಾಜ ಪಟೇಲ್ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ಡಿ.ಎಂ.ಮಹದೇವಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ಯರೇಹಳ್ಳಿ ಮಂಜು, ಕೂಟಗಲ್ ಹೋಬಳಿ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷೆ ಪುಟ್ಟಗೌರಮ್ಮ, ಗ್ರಾಪಂ ಸದಸ್ಯ ಮಂಚೇಗೌಡ, ಮಹಿಳಾ ಮುಖಂಡರಾದ ಅಂಬುಜಾಕ್ಷಿ ಮುಂತಾದವರು ಹಾಜರಿದ್ದರು.