Advertisement

ಗ್ರಾಮಾಭಿವೃದ್ಧಿಗೆ ಸಹಕಾರ ಮುಖ್ಯ

07:00 PM Oct 11, 2020 | Suhan S |

ಹೂವಿನಹಿಪ್ಪರಗಿ: ಗ್ರಾಮೀಣ ಪ್ರದೇಶಗಳ ಸವರತೋಮುಖ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್‌ ಧುರೀಣ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹೇಳಿದರು.

Advertisement

ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ನವೀಕರಿಸಲ್ಪಟ್ಟ ಗ್ರಾಮ ಪಂಚಾಯತ್‌ ಕಟ್ಟಡ ಉದ್ಘಾಟನೆ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನ ಚಾಲನೆ ಮತ್ತು ಪರಿಕರಣಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಸ್ಥರ ಸಹಕಾರದಿಂದ ಕುದರಿ ಸಾಲವಾಡಗಿ ಪಂಚಾಯತ್‌ ಸತತವಾಗಿ ಎರಡು ಬಾರಿ ಗಾಂ ಧಿ ಗ್ರಾಮ ಪುರಸ್ಕೃತಗೊಂಡಿದ್ದು ಹೆಮ್ಮೆ ಸಂಗತಿಯಾಗಿದೆ. ಸರಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡುವ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.

ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಇಚ್ಛಾಶಕ್ತಿ ಪ್ರಮುಖವಾಗಿರುತ್ತದೆ. ಇದಕ್ಕೆಲ್ಲ ಪೂರಕವೆಂಬಂತೆ ಕುದರಿ ಸಾಲವಾಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗ ಶಿಸ್ತಿನಿಂದ ಕಾರ್ಯ ನಿರ್ವಹಿಸುವ ಮೂಲಕ ಇತರ ಪಂಚಾಯತ್‌ ಅಧಿ ಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಇಂದು ಪಂಚಾಯತ್‌ನಿಂದ ಘನತ್ಯಾಜ್ಯ ಸಂಗ್ರಹಿಸಲು ಬಿಪಿಎಲ್‌ ಕಾರ್ಡ್‌ ಹೊಂದಿದ ಹಾಗೂ ಬಡವರಿಗೆ ಎರಡು ಬಕೆಟ್‌ ನೀಡುತ್ತಿದ್ದಾರೆ. ಒಂದರಲ್ಲಿ ಹಸಿ ಕಸ ಇನ್ನೊಂದರಲ್ಲಿ ಒಣ ಕಸ ಹಾಕಬೇಕು. ಬೆಳಗ್ಗೆ ಘನತ್ಯಾಜ್ಯ ವಿಲೇವಾರಿ ವಾಹನ ನಿಮ್ಮ ಮನೆ ಮುಂದೆ ಬರುತ್ತದೆ. ನೀವು ಸಂಗ್ರಹಿಸಿದ ಕಸವನ್ನು ವಾಹನಕ್ಕೆ ಹಾಕುವ ಮೂಲಕ ಗ್ರಾಮದ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

Advertisement

ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಿ.ಎಲ್‌. ಪಾಟೀಲ ಮಾತನಾಡಿ, ಎರಡು ಬಾರಿ ಸತತವಾಗಿ ಗಾಂಧಿ  ಪುರಸ್ಕಾರ ಮೂಲಕ ಕುದರಿ ಸಾಲವಾಡಗಿ ಪಂಚಾಯತ್‌ ತಾಲೂಕಿನಲ್ಲಿಯೇ ಮಾದರಿಯಾಗಿ ಹೊರ ಹೊಮ್ಮಿದೆ. ಗ್ರಾಮದ ಅಭಿವೃದ್ಧಿಗೆ ಪಂಚಾಯತ್‌ ಅಧಿ ಕಾರಿಗಳೊಂದಿಗೆ ಗ್ರಾಮಸ್ಥರು ಕೈ ಜೋಡಿಸಬೇಕು. ಕೊವೀಡ್‌-19 ಹೊಡೆದೊಡಿಸುವಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಹಂಗುತೊರೆದು ಹೋರಾಡುತ್ತಿದ್ದಾರೆ. ಅಂತಹ ಮಹನೀಯರನ್ನು ಇಲ್ಲಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಅರಣ್ಯಾಧಿಕಾರಿ ಎ.ಎಸ್‌. ಪಾಕಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಸವರಾಜ ದೇಸಾಯಿ, ಎಸ್‌.ಬಿ. ಪಾಟೀಲ, ಎ.ಬಿ. ಪಾಟೀಲ, ತಾಪಂ ಸದಸ್ಯ ಜಾಕೀರ್‌ ಹುಸೇನ್‌ ಶಿವಣಗಿ, ದೇವಮ್ಮ ಹಚಡದ, ಪಿ.ಎಸ್‌. ಲಗಳಿ, ಬೆಳ್ಳೆಪ್ಪ ಜಕ್ಕೆನಾಳ, ಭೀಮನಗೌಡ ಹಚಡದ, ಶೇಖರಗೌಡ ಪಾಟೀಲ, ರುದ್ರಗೌಡ ಹಚಡದ, ಗುರುನಗೌಡ ಪಾಟೀಲ, ಪಿಡಿಒ ಬಿ.ಎಸ್‌.ಬಡಿಗೇರ ವೇದಿಕೆಯಲ್ಲಿದ್ದರು. ಪಂಚಾಯತ್‌ ಕಾರ್ಯದರ್ಶಿ ಎನ್‌.ಶೈಲಜಾ ಸ್ವಾಗತಿಸಿದರು. ಶಿಕ್ಷಕ ಎಸ್‌.ಬಿ. ಬಾಗೇವಾಡಿ ನಿರೂಪಿಸಿದರು. ಎಂ.ವಿ. ಅಣ್ಣಪ್ಪನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next