ಬನಹಟ್ಟಿ: ಭಾರತ ಸೇವಾದಳ ಉತ್ಸಾಹ, ಸಂತಸ ತುಂಬುವ ಚಟುವಟಿಕೆಗಳಿಂದ ಮಕ್ಕಳಲ್ಲಿ ಆರೋಗ್ಯಪೂರ್ಣ ಹವ್ಯಾಸ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಗ್ರಾಮದ ಮುಖಂಡ ಪಿ.ಡಿ. ನೇಸೂರ ಹೇಳಿದರು.
ಚಿಮ್ಮಡ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ನಡೆದ ಜಮಖಂಡಿ,ರಬಕವಿ-ಬನಹಟ್ಟಿ ತಾಲೂಕು ಮಟ್ಟದ ಭಾರತ ಸೇವಾದಳ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು. ಶಾಲೆಯೇ ಜೀವಂತ ದೇವಾಲಯ. ಅದರ ಪ್ರಗತಿಗೆ, ಮಕ್ಕಳ ಶ್ರೇಯೋಭಿವೃದ್ಧಿಗೆ ಎಸ್ ಡಿಇಎಂಸಿ, ಸಮುದಾಯ ಸೇರಿದಂತೆ ಎಲ್ಲರ ಸಹಕಾರವೂ ಅವಶ್ಯ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಭೀಮಪ್ಪ ಅರೂಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಮಹೇಶ್ ಪತ್ತಾರ ಮಾತನಾಡಿ, ಭಾರತಸೇವಾದಳ ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡಿದ್ದರಿಂದಮಕ್ಕಳು ಉತ್ತಮ ಪ್ರದರ್ಶನ ನೀಡುವಲ್ಲಿ, ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಆರ್.ವೈ. ಮುಗಳಖೋಡ, ಬೀರೇಂದ್ರಫೌಂಡೇಷನ್ ಅಧ್ಯಕ್ಷ ಪರಪ್ಪ ಮುಂದಿನಮನಿ,ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ನಿರ್ದೇಶಕ ಬಿ.ಡಿ. ನೇಮಗೌಡ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಯೋಜಕ ಎಸ್.ಬಿ. ಬುರ್ಲಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದೇವೇಂದ್ರ ವಂದಾಲ, ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿಹಂಜಗಿ, ಬಿ.ಎಸ್. ಹಲಗಿ, ಎಸ್.ಟಿ. ಮಾಳಗೆ, ಜಿ.ವಿ. ಮಂಜುನಾಥ, ಭಾರತ ಸೇವಾದಳ ಜಮಖಂಡಿ ಅ ನಾಯಕ ಪಿ.ಎಂ. ಭಜಂತ್ರಿ, ಶಾಂತಪ್ಪ ಕೆ., ಪಿ.ಪಿ. ಮಾಳಿಗಡ್ಡಿ ಕನ್ನಡ ಶಾಲೆ ಮುಖ್ಯ ಗುರುಮಾತೆ ಹಿರೇಮಠ ಇದ್ದರು. ವಿ.ಎಸ್. ಉಪ್ಪಿನ ಗೌರವ ರಕ್ಷೆ ನಡೆಸಿಕೊಟ್ಟರು. ಸಾಮೂಹಿಕವಾಗಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಶಾಖಾ ನಾಯಕ ಎಸ್.ಎ. ಬಿರಾದಾರ ಸ್ವಾಗತಿಸಿದರು. ಭಾರತ ಸೇವಾದಳ ತಾಲೂಕು ಸಮಿತಿ ಸದಸ್ಯ ಮ.ಕೃ. ಮೇಗಾಡಿ ನಿರೂಪಿಸಿದರು. ಜ್ಯೋತಿ ಗಡೆನ್ನವರ ವಂದಿಸಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಬಾಗಲಕೋಟೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ, ಭಾರತ ಸೇವಾದಳ ತಾಲೂಕುಸಮಿತಿ, ಗ್ರಾಪಂ ಚಿಮ್ಮಡ, ಸಮೂಹ ಸಂಪನ್ಮೂಲ ಕೇಂದ್ರ ಚಿಮ್ಮಡ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಎಸ್‌ಡಿಎಂಸಿ ಚಿಮ್ಮಡ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.