Advertisement

ಅಭಿವೃದ್ಧಿಗೆ ಸಹಕಾರ ಅಗತ್ಯ

05:55 PM Sep 24, 2019 | Team Udayavani |

ತಿಪಟೂರು: ಕಾಲೇಜು ಅಭಿವೃದ್ಧಿಗೆ ಪೋಷಕರ ಸಹಕಾರ ಅಗತ್ಯವಾಗಿದ್ದು, ಕಾಲೇಜಿನೊಂದಿಗೆ ಉತ್ತಮ ಒಡನಾಟ ವಿಟ್ಟು ಅಭಿವೃದ್ಧಿಗೆ ಶ್ರಮಿಸಬೇಕೆಂದು ಪೋಷಕರ ಸಂಘದ ಅಧ್ಯಕ್ಷ ಬಿಲ್ಲೇಮನೆ ಚಂದ್ರಶೇಖರ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಷಕರ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಪೋಷಕರ ಸಭೆ ಉದ್ಘಾಟಿಸಿ ಮಾತನಾಡಿದರು. ಪೋಷಕರು ಶಿಕ್ಷಕರ ಜೊತೆ ಕೈ ಜೋಡಿ ಸಿದರೆ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದು ಮುಖ್ಯವಲ್ಲ. ಕಾಲೇಜು ಮತ್ತು ಉಪನ್ಯಾಸಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅವರ ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಕೆ.ಎಂ. ರಾಜಣ್ಣ, ಕಾಲೇಜಿನಲ್ಲಿ ಸಾಕಷ್ಟು ಮೂಲ ಸೌಕರ್ಯಗಳ ಕೊರತೆಯಿದ್ದು, ಇದ ರಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಜನಪ್ರತಿನಿಧಿಗಳು ಯಾವುದೇ ಅನುಮಾನ ಇಟ್ಟುಕೊಳ್ಳದೆ ಉತ್ತಮ ಒಡನಾಟವಿಟ್ಟು ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಬೇಕಿದೆಎಂದರು. ಪೋಷಕರ ಸಂಘದ ಸಂಚಾಲಕ ಪ್ರೊ. ಜಿ.ಸಿ. ನೀಲಕಂಠಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಕೃತ ವಿದ್ವಾಂಸ ಡಿ.ಎಚ್‌. ಗಂಗಣ್ಣ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ. ಎಸ್‌. ಆರ್‌. ನಾಗಭೂಷಣ್‌, ಪೋಷಕರ ಸಂಘದ ಕಾರ್ಯದರ್ಶಿ ಶೇಖರಪ್ಪ, ಪ್ರೊ. ಎಚ್‌.ಬಿ. ಕುಮಾರಸ್ವಾಮಿ, ಡಾ. ಎನ್‌. ನರಸಿಂಹರಾಜು, ಪ್ರೊ. ಎಂ.ಆರ್‌. ಚಿಕ್ಕಹೆಗ್ಗಡೆ, ಪ್ರೊ. ಕೆ.ವಿ. ನಾಗರಾಜು, ಪ್ರೊ. ಕೆ. ನಾಗರಾಜು, ಪ್ರೊ. ಅನು ಪ್ರಸಾದ್‌, ಲಕ್ಷಿ ರಂಗಯ್ಯ, ಎಚ್‌.ಜಿ. ರಮೇಶ್‌, ಕಲ್ಪನಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next