Advertisement

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

01:08 PM Oct 17, 2021 | Team Udayavani |

ದೊಡ್ಡಬಳ್ಳಾಪುರ: ದೇಶವನ್ನು ಕ್ಷಯ ಮುಕ್ತವಾಗಿಸಲು ಸರ್ಕಾರದೊಂದಿಗೆ ಸಮುದಾಯ ಸಹ ಒಗ್ಗೂಡಿ ಜಾಗೃತಿ ಮೂಡಿಸಿ ಸಹಕರಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಜಂಟಿ ಕಾರ್ಯದರ್ಶಿ ಎಲ್‌. ಶ್ರೀನಿವಾಸಮೂರ್ತಿ ಹೇಳಿದರು.

Advertisement

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ಕ್ಷಯ ರೋಗಿ ದತ್ತು ಹಾಗೂ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷಯರೋಗ ವಾಸಿ ಯಾಗಬಹುದಾದ ಕಾಯಿಲೆ ಯಾಗಿದ್ದು, ಆರಂಭ ದಲ್ಲಿಯೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ರೋಗವನ್ನು ಸಂಪೂರ್ಣವಾಗಿ ಗುಣ ಪಡಿಸಬಹುದು. ಇಂಥ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಆರ್ಥಿಕ ಸಂಕಷ್ಟದಲ್ಲಿರುವ ಕ್ಷಯ ರೋಗಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಮುದಾಯದ ನೆರವು ಸಹ ಅಗತ್ಯವಾಗಿದೆ ಎಂದರು.

ಶಕುಂತಲಾ ಎಂಬ ಬಡ ಕ್ಷಯರೋಗಿಗೆ ಚಿಕಿತ್ಸೆ ಮುಗಿಯುವವರೆಗೂ ಎಲ್‌.ಶ್ರೀನಿವಾಸಮೂರ್ತಿ ದತ್ತು ಪಡೆದು, ದವಸ-ಧಾನ್ಯಗಳು ಹಾಗೂ ಪೌಷ್ಟಿಕ ಆಹಾರವನ್ನು ವಿತರಿಸಿದರು. ತಾಲೂಕಿನ ಮರಳೇನಹಳ್ಳಿಯ ಆರತಿ ಫಾರ್ಮಾಸಿಸ್ಟ್‌ ಸಂಸ್ಥೆಯಿಂದ ಕ್ಷಯರೋಗಿಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್‌, ವೈದ್ಯರಾದ ಡಾ.ಚೆನ್ನಕೇಶವ, ಡಾ.ಮಂಜುನಾಥ್‌, ಕ್ಷಯರೋಗ ಸಂದರ್ಶಕ ಯುವರಾಜ್‌ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next