Advertisement

ಕ್ವಾರಂಟೈನ್‌ನಲ್ಲಿಡಲು ಸಹಕಾರ ಕೊಡಿ: ತಹಶೀಲ್ದಾರ್‌

10:44 AM May 12, 2020 | mahesh |

ಮೊಳಕಾಲ್ಮೂರು: ಕೋವಿಡ್ ವೈರಸ್‌ ಶಂಕಿತರನ್ನು ಸ್ಥಳಿಯ ವಸತಿನಿಲಯಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ಅದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಹಶೀಲ್ದಾರ್‌ ಎಂ. ಬಸವರಾಜ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಕೋವಿಡ್‌ ನಿಯಂತ್ರಣ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ವೈರಸ್‌ ಕಾಣಿಸಿಕೊಂಡಿದೆ. ತಾಲೂಕಿನ ಜನರಲ್ಲಿ ಕಾಣಿಸಿಕೊಂಡಲ್ಲಿ ಅವರನ್ನು ಮನೆಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿಟ್ಟು ನಿಯಂತ್ರಿಸುವುದು ಅಸಾಧ್ಯ. ಹಾಗಾಗಿ ಮೇಲಾಧಿ ಕಾರಿಗಳ ನಿರ್ದೇಶನದ ಮೇರೆಗೆ ಸ್ಥಳೀಯ ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿಸಲಾಗುವುದು. ನೆರೆಯ ಆಂಧ್ರದ ಕಲ್ಯಾಣದುರ್ಗ ಹಾಗೂ ಇನ್ನಿತರ ಪ್ರದೇಶಗಳಿಂದ ಹಣ್ಣು ಹಾಗೂ ತರಕಾರಿ ತಾಲೂಕಿಗೆ ಆಮದಾಗದಂತೆ ನಿಯಂತ್ರಿಸಲು ಚೆಕ್‌ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ಮಾತನಾಡಿ, ತಾಲೂಕಿನಲ್ಲಿ ಕೋವಿಡ್‌-19 ಸೋಂಕು ಹರಡಿದಲ್ಲಿ ಸ್ಥಳೀಯರನ್ನು ಕ್ವಾರಂಟೈನ್‌ನಲ್ಲಿಡಲು ತಾಲೂಕಿನ ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳು, ಇತರೆ ಶಾಲಾ ಕಟ್ಟಡಗಳು ಸೇರಿದಂತೆ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿಸಲಾಗುವುದು ಎಂದರು.

ತಾಪಂ ಇಒ ಪ್ರಕಾಶ್‌ ಮಾತನಾಡಿ, ನೆರೆಯ ಆಂಧ್ರದಿಂದ ತಾಲೂಕಿಗೆ ಜನರು ಆಗಮಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಸೂಕ್ತ
ಆದೇಶ ನೀಡಿದರೆ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ, ಪಿಎಸ್‌ಐ ಎಂ.ಕೆ. ಸೋಮಶೇಖರ್‌, ಬಿಇಒ ಸೋಮಶೇಖರ್‌, ಬಿಸಿಎಂನ ಶೇಖರ್‌, ಪರಿಶಿಷ್ಟ ವರ್ಗಗಳ ಕಲ್ಯಾಣಾ ಧಿಕಾರಿ ಟಿ.
ಗುರುಮೂರ್ತಿ, ಪಪಂ ಮುಖ್ಯಾಧಿಕಾರಿ ಎಚ್‌. ಕಾಂತರಾಜ್‌, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀನಿವಾಸ್‌, ತಿಪ್ಪೇಶ್‌, ಆರ್‌ಐ ಉಮೇಶ್‌ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next