Advertisement

ಮಾರುಕಟ್ಟೆ ಅಭಿವೃದ್ಧಿಗೆ ಸಹಕರಿಸಿ

12:32 PM Jan 24, 2021 | Team Udayavani |

ನವಲಗುಂದ: ಪಟ್ಟಣದ ಹೃದಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ತರಕಾರಿ ಹಾಗೂ ಬೀದಿ ವ್ಯಾಪಾರಸ್ಥರು ಸಹಕರಿ ಸಬೇಕು. ಸಾರ್ವಜನಿಕರಿಗೆ ಆಗುವ ಸಮಸ್ಯೆಗೆ ಸ್ಪಂದಿಸಬೇಕು. ಇದರಿಂದ ಪಟ್ಟಣ ಅಭಿವೃದ್ಧಿಗೂ ಸಹಕರಿಸಿದಂತಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ಹೇಳಿದರು.

Advertisement

ಶನಿವಾರ ಎಪಿಎಂಸಿಯಲ್ಲಿನ ನೂತನ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರ ಜೊತೆಗೆ ಮಾತನಾಡಿದರು. ಈ ಮೊದಲು ಇದ್ದ ತರಕಾರಿ ಮಾರುಕಟ್ಟೆ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿತ್ತು. ಹಲವಾರು ವರ್ಷಗಳಿಂದ ಬೇಡಿಕೆ ಇದ್ದುದರಿಂದ ಸ್ಥಳಾಂತರ ಮಾಡಬೇಕಾಯಿತು ಎಂದರು.

ಇದನ್ನೂ ಓದಿ:ಬಸವಲಿಂಗ ಶಿವಯೋಗಿಗಳು ಮಹಾಗುರುವಿನ ಗುರು

ಮುಖ್ಯಾಧಿಕಾರಿ ಎನ್‌.ಎಚ್‌. ಖುದಾವಂದ, ಪಿಎಸ್‌ಐ ಜಯಪಾಲ ಪಾಟೀಲ ಇದ್ದರು. ಸ್ಥಳಾಂತರಗೊಂಡ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ತರಕಾರಿ ಇತರೆ ಬೀದಿ ವ್ಯಾಪಾರಸ್ಥರು ವ್ಯಾಪಾರದಲ್ಲಿ ನಿರತರಾಗಿದ್ದರು. ಸಾರ್ವಜನಿಕರು ನೂತನ ಮಾರುಕಟ್ಟೆಗೆ ಬಂದು ಖರೀದಿಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next