Advertisement

ಆರೋಗ್ಯ ಸರ್ವೆ ಕಾರ್ಯಕರ್ತರಿಗೆ ಸಹಕಾರ ನೀಡಿ: ಡಿಸಿ ಸಿಂಧೂ ರೂಪೇಶ್‌

01:22 AM Apr 14, 2020 | Team Udayavani |

ಮಂಗಳೂರು: ಕೋವಿಡ್ 19 ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಮಂಗಳೂರು ಮಹಾನಗರ ಪಾಲಿಕೆ ಎಂಪಿಡಬ್ಲ್ಯು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸರ್ವೆ ಕಾರ್ಯವನ್ನು ಆರಂಭಿಸಿದ್ದು, ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ಆಶಾ ಕಾರ್ಯಕರ್ತೆಯರು ಮನೆಗೆ ಬಂದು ಯಜಮಾನನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮಾಹಿತಿ, ಕುಟುಂಬದ ಸದಸ್ಯರಲ್ಲಿ ಜ್ವರ, ಗಂಟಲು ನೋವು, ಆಸ್ತಮಾ ಇತ್ಯಾದಿಗಳು ಇದ್ದಲ್ಲಿ ಅವರ ವಿವರವನ್ನು ಪಡೆಯಲಿದ್ದಾರೆ. ಕುಟುಂಬದಲ್ಲಿ ಇರುವ ವಯಸ್ಕರ (60 ವರ್ಷ ಮೇಲ್ಪಟ್ಟ) ಸಂಖ್ಯೆ, ಬಿ.ಪಿ., ಮಧುಮೇಹ, ಕಿಡ್ನಿ ವೈಫಲ್ಯ, ಕ್ಯಾನ್ಸರ್‌ ಇತ್ಯಾದಿ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರತಿಯೊಂದು ಕುಟುಂಬದ ಹಿತರಕ್ಷಣೆಯ ಸಲುವಾಗಿ ಆರೋಗ್ಯ ಇಲಾಖೆಯ ವತಿಯಿಂದ ಸಂಗ್ರಹಿಸಿದ ಈ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು. ಯಾವುದೇ ದಾಖಲೆಗಳನ್ನು ಜನರಿಂದ ಪಡೆಯುವುದಿಲ್ಲ ಎಂದವರು ವಿವರಿಸಿದ್ದಾರೆ.

ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಆವಶ್ಯಕತೆ ಇದೆ. ಮಹಾನಗರ ಪಾಲಿಕೆಯಿಂದ ಸೊಳ್ಳೆ ಉತ್ಪಾದನ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತ ಕ್ರಮವಾಗಿ ನೀರು ನಿಲ್ಲದಂತೆ ಕ್ರಮ ವಹಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಮನೆಯ ಮೇಲಿರುವ ಛಾವಣಿ, ನೀರಿನ ಟ್ಯಾಂಕುಗಳಲ್ಲಿ, ಫ್ರಿಜ್‌ ಹಿಂಭಾಗ, ಹೂಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಆವರಣವನ್ನು ಶುಚಿಯಾಗಿ ಇರಿಸಿಕೊಳ್ಳಬೇಕು. ಸೊಳ್ಳೆ ನಿರೋಧಕ ಉತ್ಪನ್ನಗಳಾದ ಬೇವಿನ ಎಣ್ಣೆ, ಸೊಳ್ಳೆಬತ್ತಿ, ಸೊಳ್ಳೆ ಪರದೆ ಬಳಸಲು ಕೋರಿದ್ದಾರೆ.
ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಮತ್ತು ಮಂಗಳೂರು ಮಹಾನಗರ ಪಾಲಿಕೆ ಎಂಪಿಡಬ್ಲ್ಯು ಕಾರ್ಯಕರ್ತರು ನಡೆಸುವರು. ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಿಗೆ ಮತ್ತು ಎಂಪಿಡಬ್ಲ್ಯು ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ನೀಡಲು ಮನವಿ ಮಾಡಿದ್ದಾರೆ.

ಕಟ್ಟಡ ಕಾಮಗಾರಿಗಳು ನಡೆಯುವ ಸ್ಥಗಳಲ್ಲಿ ಮಳೆ ನೀರು ನಿಲ್ಲದಂತೆ ಸಿದ್ಧತೆ ಮಾಡ ಕೊಳ್ಳಬೇಕು ಎಂದಿದ್ದಾರೆ. ಎ. 9ರಿಂದ ಈವರೆಗೆ ಫಿವರ್‌ ಕ್ಲಿನಿಕ್‌ಗಳಲ್ಲಿ 189 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯದ ಸಲಹೆ ಮೇರೆಗೆ ಸಾರ್ವಜನಿಕರು ಅಪರಿಚಿತರ ಜತೆ ಸಂಪರ್ಕಿಸುವಾಗ, ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡುವಾಗ, ಕಚೇರಿ ಅಥವಾ ಕಾರ್ಯನಿರತ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ಸೂಕ್ತ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ 6ನೇ ಸ್ಥಾನಕ್ಕೆ ಇಳಿದ ದ.ಕ.
ಮಂಗಳೂರು  ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಬೆಂಗಳೂರು, ಮೈಸೂರು ನಂತರ ಮೂರನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ ಆರನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ದೃಢಪಟ್ಟ 12 ಪ್ರಕರಣಗಳ ಪೈಕಿ ಸೋಮವಾರ ಒಬ್ಬರು ಸೇರಿದಂತೆ ಒಟ್ಟು 8 ಮಂದಿ ಗುಣಮುಖರಾಗಿದ್ದಾರೆ.

Advertisement

ಕೋವಿಡ್ 19 ಸೋಂಕು ದೃಢಪಟ್ಟು ಮಂಗಳೂರಿನ ವೆನಾÉಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ 34 ವಯಸ್ಸಿನ ವ್ಯಕ್ತಿ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ.

ಇವರು ದುಬಾೖಯಿಂದ ಮಾ. 18ರಂದು ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿ ಸುಳ್ಯ ಅಜ್ಜಾವರ ಗ್ರಾಮದ ತನ್ನ ಮನೆಗೆ ತೆರಳಿದ್ದರು. ಮಾ. 28ರಂದು ಚಿಕಿತ್ಸೆಗಾಗಿ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕು ತಗಲಿರುವುದು 31ರಂದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇವರಿಗೆ ಚಿಕಿತ್ಸೆ ನೀಡಲಾಗಿದ್ದು, ಎ. 11 ಹಾಗೂ 12ರಂದು ಗಂಟಲು ದ್ರವ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂದಿದ್ದು ಹೀಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next