Advertisement

ಪಪಂನಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಸಹಕರಿಸಿ

08:10 AM May 21, 2019 | Team Udayavani |

ಹನೂರು: ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಪಕ್ಷದ ವರಿಷ್ಠರು ನನಗೆ ವಹಿಸಿದ್ದಾರೆ. ಈ ಹಿನ್ನೆಲೆ ಉಪ್ಪಾರ ಸಮುದಾಯದ ಜನರೂ ಕೂಡ ಕಾಂಗ್ರೆಸ್‌ ಬೆಂಬಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹಿಂದುಳಿದ ವರ್ಗಗಳ ಸಚಿವ ಹಾಗೂ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

Advertisement

ಪಟ್ಟಣದ ಆರ್‌.ಎಸ್‌.ದೊಡ್ಡಿ ಬಡಾವಣೆಯ ರಾಮಮಂದಿರದಲ್ಲಿ ಉಪ್ಪಾರ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಉಪ್ಪಾರ ಸಮುದಾಯದ ಪ್ರತಿನಿಧಿಯಾಗಿ ರಾಜ್ಯದ ಏಕೈಕ ಶಾಸಕನಾಗಿ ನಾನು 3 ಬಾರಿ ಆಯ್ಕೆಯಾಗಿದ್ದೇನೆ. ಅಲ್ಲದೇ ಸಮ್ಮಿಶ್ರ ಸರ್ಕಾರ ಆಡಳಿತ ಬಂದ ಬಳಿಕ ನನ್ನನ್ನು ಸಚಿವರನ್ನಾಗಿಸಿದ್ದಾರೆ ಎಂದರು.

ಯಾವುದೇ ಒಂದು ಸಮುದಾಯ ಮುಂಬ ರಲು ರಾಜಕೀಯ ಸ್ಥಾನಮಾನವಿಲ್ಲದೆ ಮುಂದೆ ಬರಲು ಸಾಧ್ಯವಿಲ್ಲ. ಈ ಹಿನ್ನೆಲೆ ಉಪ್ಪಾರ ಸಮುದಾಯದವರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸ ಬೇಕು. ಹನೂರು ಪಪಂನ 13ನೇ ವಾರ್ಡಿನಲ್ಲಿ ಉಪ್ಪಾರ ಸಮುದಾಯವರು ಹೆಚ್ಚಾಗಿ ಇದ್ದು ಈ ವಾರ್ಡಿನಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿ ಗೆಲು ವಿಗೆ ಮುಖಂಡರು ಶ್ರಮಿಸಬೇಕು. ಈ ಮೂಲಕ ನೂತನ ತಾಲೂಕು ಕೇಂದ್ರವಾಗಿರುವ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಹೊರಗಿನವರ್ಯಾರು ಉಳಿದುಕೊಂಡಿಲ್ಲ: ಕ್ಷೇತ್ರದಲ್ಲಿ ರಾಜಕೀಯ ಮಾಡಲು ಹೊರ ಗಿನಿಂದ ಬಂದವರು ಯಾರೂ ಉಳಿದು ಕೊಂಡಿಲ್ಲ. ಈ ಹಿಂದೆ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಂತಮೂರ್ತಿ ಅವರೇ ಕಣ್ಮರೆಯಾದರು. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊರಗಿನರ ಕೊಡುಗೆ ಏನೂ ಇಲ್ಲ. ಆದ್ದರಿಂದ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಜೆಡಿಎಸ್‌ ಮುಖಂಡ ಮಂಜುನಾಥ್‌ ಹೆಸರು ಪ್ರಸ್ತಾಪಿ ಸದೆಯೇ ಟೀಕಿಸಿದರು.

ಬೇಡಿಕೆ ಈಡೇರಿಕೆಗೆ ಮನವಿ: ಸಭೆಗೂ ಮುನ್ನ ಸಮುದಾಯದ ಮುಖಂಡರು ಗ್ರಾಮದಲ್ಲಿ ಸಮುದಾಯದ ಜನತೆಗೆ ಸ್ಮಶಾನ ಭೂಮಿ ಇಲ್ಲ. ಸಮುದಾಯ ಭವನ ಇಲ್ಲ. ಹತ್ತು ಹಲವು ಮೂಲಭೂತ ಸಮಸ್ಯೆಗಳಿಂದ ವಂಚಿತರಾ ಗಿದ್ದೇವೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎಂದು ಅಹವಾಲು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇಲ್ಲಿಯವರೆಗೆ ಈ ವಿಚಾರಗಳು ನನ್ನ ಗಮನಕ್ಕೆ ಬಂದಿರಲಿಲ್ಲ. ಸ್ಮಶಾನ ಭೂಮಿ ಮಂಜೂರು ಮಾಡಲು ಯಾವುದೇ ತೊಂದರೆ ಯಿಲ್ಲ. ನನ್ನ ಅಧಿಕಾರ ವ್ಯಾಪ್ತಿಗೆ ಬರುವುದರಿಂದ ಸ್ಮಶಾನ ಭೂಮಿ ಮಂಜೂರು ಮಾಡಿಸಿ ಕೊಡು ತ್ತೇನೆ. ಸಮುದಾಯ ಭವನ ನಿರ್ಮಾಣಕ್ಕೆ ಅನು ದಾನವನ್ನು ಲೋಕಸಭಾ ಚುನಾವಣೆ ಫ‌ಲಿತಾ ಂಶದ ನಂತರ ಬಿಡುಗಡೆ ಮಾಡಲಾಗು ವುದು. ಮೂಲಭೂತ ಸೌಕರ್ಯಗಳಿಗೂ ಒತ್ತನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್‌, ಪಪಂ ಮಾಜಿ ಅಧ್ಯಕ್ಷ ಮುದ್ದುಗಾಮಶೆಟ್ಟಿ, ರಂಗರಾಜು, ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜು, ಮುಖಂಡ ಮುನರ್‌ಪಾಷಾ ಉಪ್ಪಾರ ಸಮುದಾಯದ ಮುಖಂಡರು ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next