Advertisement

ಅನಕ್ಷರತೆ ಹೋಗಲಾಡಿಸಲು ಸಹಕಾರ ನೀಡಿ

04:18 PM Nov 09, 2019 | Suhan S |

ಬಂಗಾರಪೇಟೆ: ದೇಶ ಎಲ್ಲಾ ಕ್ಷೇತ್ರಗಳಲ್ಲಿ ಶರವೇಗದಲ್ಲಿ ಬೆಳೆಯುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಅನಕ್ಷರತೆ ಪಿಡುಗು ಇನ್ನೂ ಜೀವಂತವಾಗಿದೆ. ಅದನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಜಿಲ್ಲಾ ಲೋಕ ಶಿಕ್ಷಣ ವಯಸ್ಕರ ಶಿಕ್ಷಣಾಧಿಕಾರಿ ಜಿ.ಎಂ. ಗಂಗಪ್ಪ ಹೇಳಿದರು.

Advertisement

ತಾಲೂಕಿನ ಹುದುಕುಳ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಕ್ಷಣ ಇಲಾಖೆಯ ಸಂಯೋಜಕರಿಗೆ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ಜಿಲ್ಲಾ ನಗರ ಸಾಕ್ಷರತಾ ಸಮಿತಿಯಿಂದ 2019-20ನೇ ಸಾಲಿನ ಮುಖ್ಯ ತರಬೇತಿ ದಾರರಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಅನಕ್ಷರತೆಯನ್ನು ಹೋಗಲಾಡಿಸಲು ಸರ್ಕಾರದ ಜೊತೆಗೆ ವಿದ್ಯಾವಂತ ಯುವಜನತೆ ಹಾಗೂ ಶಿಕ್ಷಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಅನಕ್ಷರತೆ ಹೆಚ್ಚಾಗಲು ಮುಖ್ಯವಾಗಿ ಬಡತನ, ಶಿಕ್ಷಣದ ಅರಿವಿಲ್ಲದಿರುವುದೇ ಕಾರಣ. ಸಮಾಜ ತಿದ್ದುವ ಕೆಲಸ ಶಿಕ್ಷಕರ ಸಮುದಾಯಕ್ಕೆ ಸೇರಿದೆ. ಹೀಗಾಗಿ ಹೆಚ್ಚಿನ ಆಸಕ್ತಿ ಹೊಂದಿ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಬೇಕಾಗಿದೆ. ಅನಕ್ಷರಸ್ಥರಲ್ಲೂ ಎಲ್ಲ ತರದ ಜ್ಞಾನವೂ ಇರುತ್ತದೆ. ಅದನ್ನು ಶಿಕ್ಷಣ ರೂಪದಲ್ಲಿ ನೀಡುವ ಕೆಲಸ ವಿದ್ಯಾವಂತರು ಹಾಗೂ

ಶಿಕ್ಷಕರು ಮಾಡಬೇಕಿದೆ ಎಂದು ಹೇಳಿದರು. ಕಾರ್ಯಾಗಾರ ಸಹಾಯಕ ಅಧಿಕಾರಿ ಡಿ.ಆರ್‌.ರಾಜಪ್ಪ ಮಾತನಾಡಿ, ಜಿಲ್ಲೆಯು ಸಾಕ್ಷರತೆಯಲ್ಲಿ 14ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಗಳಿಸಲು ಜಿಲ್ಲಾ ಲೋಕ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಎಲ್ಲಾ ಪ್ರಯತ್ನ ಮಾಡುತ್ತಿದೆ. ಶಿಕ್ಷಕರು ಅನಕ್ಷರತೆ ಸಂಪೂರ್ಣವಾಗಿ ಹೋಗಲಾಡಿಸಲು ಎಲ್ಲಾ ವಿದ್ಯಾವಂತರು ಸ್ವಯಂ ಪ್ರೇರಣೆಯಿಂದ ಅನಕ್ಷರಸ್ಥರಿಗೆ ಅಕ್ಷರ ಕಲಿಸಲು ಪ್ರಾಮಾಣಿಕ ಕೆಲಸ ಮಾಡಬೇಕಿದೆ ಎಂದರು.

ಹುದುಕುಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸರೋಜಾ, ಸಂಪನ್ಮೂಲ ವ್ಯಕ್ತಿ ನಾಗವೇಣಿ, ತಾಲೂಕು ಸಂಯೋಜಕ ಅಶ್ವತ್ಥ, ರವೀಂದ್ರನಾಯ್ಡು, ಎಚ್‌ .ವಿ.ನಾರಾಯಣಸ್ವಾಮಿ, ಡಯಟ್‌ ಕಾಲೇಜಿನ ಉಪನ್ಯಾಸಕ ಪುರುಷೋತ್ತಮ್‌, ಪೋಕಸ್‌ ಟ್ರಸ್ಟ್‌ ಅಧ್ಯಕ್ಷ ಎ.ಹರೀಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next