Advertisement
ಐತಿಹ್ಯಪೂರ್ಣವಾದ ಕ್ಷೇತ್ರ ಎಂದೇ ಖ್ಯಾತಿವೆತ್ತ ಶ್ರೀಕ್ಷೇತ್ರವು ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಕಾರಣಿಕ ಕ್ಷೇತ್ರ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಜಾಂಬ್ರಿ ಗುಹಾಪ್ರವೇಶ ಈ ಕ್ಷೇತ್ರದ ಇನ್ನೊಂದು ವಿಶೇಷತೆ. ಮಾತ್ರವಲ್ಲದೆ ಅತಿರುದ್ರ ಮಹಾಯಾಗವೂ ಇಲ್ಲಿ ಸಂಪನ್ನಗೊಂಡಿದೆ. ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಪರಮಶಿವನ ಸನ್ನಿಧಿ. ಇಲ್ಲಿ ಸಮರ್ಪಣ ಭಾವದಿಂದ ಪ್ರಾರ್ಥಿಸಿ ಸೀಯಾಳಾಭಿಷೇಕ ಮಾಡಿದಲ್ಲಿ ವರುಣನ ಕೃಪೆಯಾಗುತ್ತದೆ ಎಂಬ ನಂಬಿಕೆ ಸುಳ್ಳಾಗಲಿಲ್ಲ.
Related Articles
Advertisement
ಹುರಿಹಗ್ಗ ಹರಕೆಉಬ್ಬಸ ರೋಗದಿಂದ ಮುಕ್ತರಾಗಲು ಭಕ್ತರು ಭಕ್ತಿಯಿಂದ ಬಾವಿಗೆ ಹುರಿಹಗ್ಗವನ್ನು ಸಮರ್ಪಿಸುವುದು ಇಲ್ಲಿನ ವಿಶೇಷ ಹರಕೆ. ಕೇರಳ ಹಾಗೂ ಕರ್ನಾಟಕದ ಅಸಂಖ್ಯ ಭಕ್ತರು ಹಗ್ಗ ಸಮರ್ಪಿಸಿ ರೋಗಮುಕ್ತರಾಗಿದ್ದಾರೆ. ಮಾಂಗಲ್ಯ ಭಾಗ್ಯ ಪ್ರಾಪ್ತಿಗಾಗಿ ದೇವರಿಗೆ ತುಪ್ಪ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಉತ್ತಮ ಬಾಂಧವ್ಯ ಕೂಡಿ ಬಂದು ಮದುವೆ ಭಾಗ್ಯ ಕೈಗೂಡುತ್ತದೆ.
-ರಾಮಪ್ರಸಾದ ಕೇಕುಣ್ಣಾಯ, ದೇವಸ್ಥಾನದ ಅರ್ಚಕರು. ಪೂರೈಕೆಗೆ ಕ್ರಮ
ಭಕ್ತರ ಇಷ್ಟಾರ್ಥಗಳನ್ನು ಸಕಾಲದಲ್ಲಿ ಸಿದ್ಧಿಸುವಂತೆ ಮಾಡುವ ಮಹಾಲಿಂಗೇಶ್ವರ ಈ ಊರ ಜನರ ರಕ್ಷಕರಾಗಿದ್ದು ಭಕ್ತರ ಭಕ್ತಿಗೆ ಕರುಣೆಯ ಮಳೆ ಸುರಿಸುವ ಕರುಣಾಮಯಿ. ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಕ್ಷೇತ್ರವು ಐತಿಹ್ಯಪೂರ್ಣವಾದ ಹಿನ್ನೆಲೆಯಿರುವ ಅಪರೂಪದ ಕ್ಷೇತ್ರಗಳಲ್ಲಿ ಒಂದಾಗಿದೆ. – ನವನೀತಪ್ರಿಯ ಕೈಪಂಗಳ, ನೆಟ್ಟಣಿಗೆ, ಜೋತಿಷಿ