Advertisement
ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಧೋನಿಗೆ ವಯಸ್ಸಾಗಿದೆ, ಅವರು ಟಿ20 ಪಂದ್ಯವನ್ನು ಟೆಸ್ಟ್ ರೀತಿಯಲ್ಲಿ ಆಡ್ತಾರೆ, ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಬೇಕು ಎನ್ನುತ್ತಿದ್ದ ಹಿರಿಯ ಆಟಗಾರರು ಹಾಗೂ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ಧೋನಿ ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 1 ಬೌಂಡರಿ ಸಮೇತ 70 ರನ್ ಸಿಡಿಸಿದರು. ಅಷ್ಟು ಮಾತ್ರವಲ್ಲ ಗೆಲುವು ಅಸಾಧ್ಯವೆನಿಸಿದ ಪಂದ್ಯದಲ್ಲೂ ತಂಡವನ್ನು ಗೆಲ್ಲಿಸಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಆ ಪಂದ್ಯವನ್ನು ಜನ ಖಂಡಿತ ನೋಡಿರುತ್ತಾರೆ. ಅವತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ 30 ರನ್‌ಗಳು ಬೇಕಿದ್ದಾಗ ಧೋನಿ ಹಾಗೂ ಬ್ರಾವೋ ಕ್ರೀಸ್‌ನಲ್ಲಿದ್ದರು. 19ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 14 ರನ್ ನೀಡಿದರು. ಕೊನೆಯ 6 ಬಾಲ್‌ಗಳಲ್ಲಿ ಗೆಲುವಿಗೆ 16ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನ ನಾಲ್ಕನೇ ಎಸೆತವನ್ನು ಸಿಕ್ಸರ್ ಬಾರಿಸಿ ಧೋನಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.
Related Articles
ಕಳೆದ ಎಲ್ಲ ಐಪಿಎಲ್ ಋತುಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಧೋನಿ ಅತ್ಯುತ್ತಮವಾದ ಸ್ಟ್ರೈಕ್‌ರೇಟ್ (169.58) ಹೊಂದಿದ್ದಾರೆ. 2013ರ 162.89 ಸ್ಟ್ರೈಕ್‌ರೇಟ್ ಈ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.
Advertisement
ಸಿಕ್ಸರ್ ಕಿಂಗ್ ಧೋನಿಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಈವರೆಗೆ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ (ಮೇ 8ರಷ್ಟೊತ್ತಿಗೆ) ಎಂಬ ಹೆಗ್ಗಳಿಕೆಗೆ 36ರ ಹರೆಯದ ಧೋನಿ ಪಾತ್ರವಾಗಿದ್ದಾರೆ. ತಾವಾಡಿರುವ 9 ಪಂದ್ಯಗಳಲ್ಲಿ 27 ಸಿಕ್ಸರ್ ಬಾರಿಸಿರುವ ಅವರು ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಧೋನಿ ಕ್ರೀಸ್‌ನಲ್ಲಿದ್ದರೆ ಗೆಲುವು ಪಕ್ಕಾ!
ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ನಲ್ಲಿದ್ದರೆ ಗುರಿ ಎಷ್ಟಿದ್ದರೂ ಗೆಲುವು ಮಾತ್ರ ನಮ್ಮದೇ ಎಂಬುದು ಚೆನ್ನೈ ಆಟಗಾರರ ನಂಬಿಕೆಯಾಗಿದೆ. ಅದಕ್ಕೆ ತಕ್ಕಂತೆ ಧೋನಿ ಅತ್ಯುತ್ತಮವಾಗಿ ಆಡುವ ಮೂಲಕ ಗೆಲುವು ತಂದುಕೊಡುತ್ತಿದ್ದಾರೆ. ಓವರ್‌ಗೆ 20 ರನ್ ಅಗತ್ಯವಿದ್ದರೂ ಗೊಂದಲಕ್ಕೆ ಒಳಗಾಗದೆ,
ತಾಳ್ಮೆಯಿಂದ ಬ್ಯಾಟ್ ಬೀಸುತ್ತಾ ಸಿಕ್ಸರ್, ಫೋರ್ ಗಳೊಂದಿಗೆ ಗೆಲುವಿನ ಮಾಲೆ ಹೆಣೆಯುವ ಧೋನಿ
ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ವೆಂ.ಸುನೀಲ್ ಕುಮಾರ್