Advertisement

ಅಡುಗೆ ಸಿಬಂದಿಗೂ ಇನ್ನು ಪಿಂಚಣಿ

08:58 AM Sep 26, 2019 | Team Udayavani |

ಬೆಂಗಳೂರು: ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಶಾಲೆಗಳಲ್ಲಿ ಕೆಲಸ ಮಾಡುವ ಅಡುಗೆ ಸಿಬಂದಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಪಿಂಚಣಿ ಯೋಜನೆ ಸೌಲಭ್ಯ ಒದಗಿಸಲು ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಎಲ್ಲ ಅಡುಗೆ ಸಿಬಂದಿಯನ್ನು (ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರು) ಪಿಂಚಣಿ ಯೋಜನೆಯಲ್ಲಿ ಫ‌ಲಾನುಭವಿಗಳಾಗಿ ನೋಂದಾಯಿಸಲು, ಯೋಜನೆಯ ಸೌಲಭ್ಯ ಹೊಂದಲು ಅವಕಾಶವಿದೆ.

ಹೀಗಾಗಿ 2019-20ನೇ ಸಾಲಿನ ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ಸಿಬಂದಿಯನ್ನು ಫ‌ಲಾನುಭವಿಗಳಾಗಿಸಲು ಕ್ರಿಯಾಯೋಜನೆ ರಚಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ| ಜೆ.ಜಗದೀಶ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next