Advertisement

ಎಸ್‌ಡಿಎಮ್‌ ಘಟಿಕೋತ್ಸವ: ಭಾನುಪ್ರಿಯಾಗೆ ಚಿನ್ನದ ಪದಕ

09:37 PM Jul 18, 2021 | Team Udayavani |

ಧಾರವಾಡ: ಎಸ್‌ಡಿಎಂ ಎಂಜಿನಿ ಯರಿಂಗ್‌ ಕಾಲೇಜಿನಲ್ಲಿ ನಡೆದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ 2019-20ನೇ ಸಾಲಿನ ಎಂ.ಟೆಕ್‌ ಸಿವಿಲ್‌ ವಿಭಾಗದಲ್ಲಿ 9.95 ಸಿಜಿಪಿಎ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದ ಭಾನುಪ್ರಿಯಾ ಎಸ್‌. ನಾಗಾ ಅವರು ಡಾ| ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪಡೆದಿದ್ದಾರೆ.

Advertisement

ಎಸ್‌ಡಿಎಂ ಸೊಸೈಟಿಯ ಕಾರ್ಯದರ್ಶಿ ಜೀವಂಧರ ಕುಮಾರ ಅವರು ಚಿನ್ನದ ಪದಕ ಪ್ರದಾನ ಮಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಕೆ. ಗೋಪಿನಾಥ, ಸಿವಿಲ್‌ ವಿಭಾಗದ ಮುಖ್ಯಸ್ಥ ಡಾ| ಉದಯಶಂಕರ ಹಕ್ಕಾರೆ ಇದ್ದರು.

ವಿದ್ಯಾರ್ಥಿನಿ ಸಾಧನೆಗೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂ ದಿ ಹರ್ಷ ವ್ಯಕ್ತಪಡಿಸಿದ್ದಾರೆ. ಭಾನುಪ್ರಿಯಾ ಅವರ ತಂದೆ ಎಸ್‌.ನಾಗಾ ಅವರು ಮಗಳ ಕಾಲೇಜಿನಲ್ಲೇ ಶಿಕ್ಷಕೇತರ ಸಿಬ್ಬಂದಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next