Advertisement

ದೊಂಬಿ ಪ್ರಕರಣದ ದೋಷಿ ಹಾರ್ದಿಕ್‌ ಪಟೇಲ್‌ ಲೋಕಸಭೆಗೆ ಸ್ಪರ್ಧಿಸಲಾರರು

09:59 AM Mar 30, 2019 | Sathish malya |

ವಡೋದರ : 2015ರ ಗುಜರಾತ್‌ನ ಮೆಹಸಾನಾ ದೊಂಬಿಯ ದೋಷಿ ಎಂದು ನ್ಯಾಯಾಲಯದಿಂದ ಪರಿಗಣಿತರಾಗಿರುವ ಪಾಟಿದಾರ್‌ ಸಮುದಾಯದ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕ ಹಾರ್ದಿಕ್‌ ಪಟೇಲ್‌ಗೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದು ಎಂದು ವರದಿಗಳು ತಿಳಿಸಿವೆ.

Advertisement

ತಾನು ಮೆಹಸಾನಾ ದೊಂಬಿಯ ದೋಷಿ ಎಂಬ ತೀರ್ಪನ್ನು ಅಮಾನತಿನಲ್ಲಿರಿಸಬೇಕು ಎಂದು ಹಾರ್ದಿಕ್‌ ಪಟೇಲ್‌ ಮಾಡಿಕೊಂಡಿರುವ ಮನವಿಯನ್ನು ಗುಜರಾತ್‌ ಹೈಕೋರ್ಟ್‌ ತಿರಸ್ಕರಿಸಿರುವುದೇ ಇದಕ್ಕೆ ಕಾರಣವಾಗಿದೆ.

1951ರ ಜನತಾ ಪ್ರಾತಿನಿಧ್ಯ ಕಾಯಿದೆ ಪ್ರಕಾರ ದೊಂಬಿ ಪ್ರಕರಣವೊಂದರ ದೋಷಿಯಾಗಿರುವ ಹಾರ್ದಿಕ್‌ ಪಟೇಲ್‌ಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next