Advertisement

ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

03:19 PM Mar 22, 2022 | Team Udayavani |

ಲಿಂಗಸುಗೂರು: ಎಂಜಿನಿಯರ್‌ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದಸಂಸ ಮುಖಂಡರು ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದ ವಿಜಯಪುರದ ಮೂಲದ ಯುವತಿಯನ್ನು ಬಾದಾಮಿಯ ಶಿವಾನಂದ ಎಂಬುವರು ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಪ್ರೀತಿಸಿ ಮದುವೆಯಾಗುತ್ತೇನೆ ಸುಳ್ಳು ಭರವಸೆ ನೀಡಿ ಆಕೆಯ ಜೀವನ ಹಾಳು ಮಾಡಿದ್ದಾನೆ.

ಮದುವೆಯಾಗುವಂತೆ ಒತ್ತಾಯ ಮಾಡಿದಾಗ ಮದುವೆಯಾಗುವೆ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪೆಟ್ರೋಲ್‌ ಹಾಕಿ ಕೊಲೆ ಮಾಡಿದ್ದಾನೆ. ಈ ಪ್ರಕರಣ ರಾಷ್ಟ್ರದ ಮಹಿಳಾ ಸಮುದಾಯ ತಲೆತಗ್ಗಿಸುವಂಥದ್ದಾಗಿದೆ. ಇದು ಮರ್ಯಾದೆ ಹತ್ಯೆಯಾಗಿದೆ. ಕೂಡಲೇ ಶಿವುಕುಮಾರ ಹಾಗೂ ಆತನ ಸಹಚರರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ತಾಲೂಕು ಸಂಚಾಲಕ ಯಲ್ಲಪ್ಪ ಹಾಲಭಾವಿ, ಅನೀಲಕುಮಾರ, ದುರಗಪ್ಪ ಮ್ಯಾಗಳಮನಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next