Advertisement

ಮತಾಂತರ ಆರೋಪಕ್ಕೆ ಖಂಡನೆ

05:40 PM Oct 06, 2021 | Team Udayavani |

ಹಾಸನ: ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಮಾಡಿರುವ ಮತಾಂತರದ ಆರೋಪ ಖಂಡಿಸಿ ಹಾಸನ ಜಿಲ್ಲಾ ಕ್ರೈಸ್ತರ ಹಿತ ರಕ್ಷಣಾ ವೇದಿಕೆ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿತು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರಾರ್ಥನೆ ಮಾಡುತ್ತಲೇ ಬೃಹತ್‌ ಮೆರವಣಿಗೆಯಲ್ಲಿ ಬಂದ ಕ್ರೈಸ್ತ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು.

Advertisement

ಕಳೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ತನ್ನ ತಾಯಿಯೂ ಸೇರಿ ತನ್ನ ಕ್ಷೇತ್ರದ ಸುಮಾರು 2 ಸಾವಿರ ಜನರನ್ನು ಕೈಸ್ತರು ಮತಾಂತರ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ತನಿಖೆಯಿಂದ ದೃಢಪಟ್ಟಿದ್ದು, ಶಾಸಕರ ಆರೋಪದಲ್ಲಿ ಹುರುಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:- ಮೋದಿ ಆಡಳಿತದಿಂದ ದೇಶಕ್ಕೆ ಹೊಸ ಶಕ್ತಿ: ರಾಘವೇಂದ್ರ

ಪ್ರಚೋಧನೆ: ಮತಾಂತರದ ಆರೋಪ ಮಾಡುತ್ತಾ ದೇಶಾದ್ಯಂತ ಚರ್ಚುಗಳ ಮೇಲೆ ದಾಳಿ, ಕ್ರೈಸ್ತ ಧರ್ಮಗುರು, ಅಮಾಯಕ ಭಕ್ತರ ಮೇಲೆ ಹಲ್ಲೆ, ಆಸ್ತಿ ಪಾಸ್ತಿಗೆ ಹಾನಿ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಂತಹ ಬೆಳವಣಿಗೆಗೆ ಬಿಜೆಪಿ ಮುಖಂಡರೇ ಕಾರಣ. ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ಪ್ರತಾಪ್‌ಸಿಂಹ ಅವರ ಹೇಳಿಕೆ ಕೋಮು ಸೌಹಾರ್ದತೆ ಹಾಳು ಮಾಡಲು ಪ್ರಚೋಧನೆ ನೀಡುವಂತಿವೆ ಎಂದರು.

ಹಿಂದೂ ಜಾಗರಣ ವೇದಿಕೆ ಕ್ರೈಸ್ತ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣ ನಡೆಯುತ್ತಿವೆ. ಕ್ರೈಸ್ತ ಮಿಷನರಿಗಳು ಗುಂಡು ಸೂಜಿಯಿಂದ ವಿಮಾನ ತಯಾರಿಕೆ ಮಾಡುವವರೆಗೂ ದೇಶಕ್ಕೆ ಕೊಡುಗೆ ನೀಡಿವೆ ಎಂಬುದನ್ನು ಮತಾಂತರದ ಆರೋಪ ಮಾಡುತ್ತಿರುವವರು ತಿಳಿದುಕೊಳ್ಳಬೇಕು.

Advertisement

ಕ್ರೈಸ್ತರು ಶಾಂತಿಪ್ರಿಯರಾಗಿದ್ದು ಯಾರ ಮೇಲೂ ದಾಳಿ ಮಾಡಿದ ಉದಾಹರಣೆ ಇಲ್ಲ ಎಂದು ಕ್ರೆçಸ್ತ ಮುಖಂಡರು ಪ್ರತಿಪಾದಿಸಿದರು.ಅಖೀಲ ಭಾರತ ಕ್ರೆçಸ್ತ ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ ಪ್ರಜ್ವಲ್‌ ಸ್ವಾಮಿ, ರಾಜ್ಯ ಕ್ರೆçಸ್ತ ಸಂಘಗಳ ಒಕ್ಕೂಟದ ಸುನೀಲ್‌ ಕುಮಾರ್‌, ಜಿಲ್ಲಾಧ್ಯಕ್ಷ ರಾಜೇಶ್‌, ಉಪಾಧ್ಯಕ್ಷ ಕೆ.ಮೂರ್ತಿ, ಕಾರ್ಯದರ್ಶಿ ಎಚ್‌.ಎಂ.ಸುರೇಶ್‌ ಪೌಲ್‌, ಜಂಟಿ ನಿರ್ದೇಶಕ ಎ.ಬಿ.ಪ್ರಕಾಶ್‌, ಖಜಾಂಚಿ ಸ್ಟೀವನ್ಸನ್‌, ಜಿಲ್ಲಾ ಕ್ರೆçಸ್ತರ ಹಿತ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್‌ ಪ್ರಕಾಶ್‌, ಸದಸ್ಯರಾದ ಎಸ್‌.ಆರ್‌.ಲಿಂಗರಾಜು, ಜಿ.ಎಸ್‌. ಸತೀಶ್‌ ಮತ್ತಿತರರು ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next